ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿ ► ಕಡಬ ನಾಡಕಛೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ತ್ವರಿತ ಅರ್ಜಿ ವಿಲೇವಾರಿಗೆ ರ್ಯಾಂಕಿಂಗ್ ವ್ಯವಸ್ಥೆ ನೀಡಲಾಗುತ್ತಿದ್ದು, ಕಡಬ ನಾಡಕಛೇರಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಸುರತ್ಕಲ್ ನಾಡಕಛೇರಿಯು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ 37 ನೇ ಸ್ಥಾನದಲ್ಲಿದೆ. ಕಡಬ ನಾಡಕಛೇರಿಯು ರಾಜ್ಯದಲ್ಲಿ 137 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳ 17 ನಾಡಕಛೇರಿಗಳ ಪೈಕಿ ಸಿಗ್ಮಾ 06.02 ರ್ಯಾಂಕಿನೊಂದಿಗೆ ಸುರತ್ಕಲ್ ಮೊದಲ ಸ್ಥಾನವನ್ನು ಪಡೆದುಕೊಂಡರೆ ಸಿಗ್ಮಾ 03.04 ರ್ಯಾಂಕಿನೊಂದಿಗೆ ಕಡಬ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ.

Also Read  ಆಗಸ್ಟ್‌ 13 ರಂದು ಕಡಬದಲ್ಲಿ ಅಖಂಡ ಭಾರತ ಸಂಕಲ್ಪ ದಿನ ► ಹಿಂಜಾವೆ ಕಡಬ ತಾಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ

error: Content is protected !!
Scroll to Top