ರಬ್ಬರ್ ಟ್ಯಾಪಿಂಗ್ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.25. ರಬ್ಬರು ಮಂಡಳಿಯ ಬಂಟ್ವಾಳ ತಾಲೂಕಿನ ಕೆದ್ದಳಿಕೆಯಲ್ಲಿರುವ ರಬ್ಬರು ಟ್ಯಾಪಿಂಗ್ ಅಭಿವೃದ್ದಿ ತರಬೇತಿ ಶಾಲೆಯಲ್ಲಿ 30 ದಿನಗಳ ಟ್ಯಾಪಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯು ಜನವರಿ 21 ರಂದು ಆರಂಭಗೊಂಡಿದ್ದು, ಆಸಕ್ತರು ನೇರವಾಗಿ ತರಬೇತಿ ಶಾಲೆಗೆ ಹಾಜರಾಗಿ ಅರ್ಜಿಯನ್ನು ನೀಡಿ ತರಬೇತಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ ; 0824-2429229 ಅಥವಾ ಮೊ.ಸಂ 9448429100 ಸಂಪರ್ಕಿಸಲು ರಬ್ಬರ್ ಉತ್ಪಾದನಾ ಉಪ ಆಯುಕ್ತರ ಪ್ರಕಟನೆ ತಿಳಿಸಿದೆ.

Also Read  ದ.ಕ. ಮೊದಲ ಕೊರೋನ ಸೋಂಕಿತ ಗುಣಮುಖ: ನಾಳೆ ಆಸ್ಪತ್ರೆಯಿಂದ ಬಿಡುಗಡೆ

error: Content is protected !!
Scroll to Top