ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ..?

(ನ್ಯೂಸ್ ಕಡಬ) newskadaba.com ಪುತ್ತೂರು, ಜ.25. ಎಲ್ಲರಂತೆ ನಡೆದಾಡಿ ಸುಂದರ ಜೀವನ ನಿರ್ವಹಿಸಬೇಕಿದ್ದ ಯುವಕನೋರ್ವ ಸುಮಾರು ಆರು ವರ್ಷಗಳಿಂದ ಕಿಡ್ನಿ ವೈಫಲ್ಯ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.

ಇಲ್ಲಿನ ಮೊಟ್ಟೆತಡ್ಕ ನಿವಾಸಿಯಾದ ಅಬ್ದುಲ್ ಶಕೀರ್(30) ಸುಮಾರು 6 ವರುಷಗಳಿಂದ ಎರಡು ಕಾಲಿನ ಶಕ್ತಿಯನ್ನು ಕಳೆದುಕೊಂಡು ನಡೆದಾಡಲು ಆಗದೆ ಕಷ್ಟಕರ ಜೀವನ ಸಾಗಿಸುತ್ತಿದ್ದಾನೆ. ವಯಸ್ಸಾದ ತಾಯಿ ಮತ್ತು ಮಗ ಒಂದು ಸಣ್ಣ ಬಾಡಿಗೆ ಮನೆಯಲ್ಲಿ‌ ವಾಸಮಾಡುತ್ತಿದ್ದಾರೆ. ಇವರ ದಯನೀಯ ಸ್ಥಿತಿ ನೋಡುಗರ ಕಣ್ಣಲ್ಲಿ ನೀರು ಬರಿಸುತ್ತಿದೆ. ಈ ಯುವಕನ 2 ಕಿಡ್ನಿಯೂ ವೈಫಲ್ಯಕ್ಕೀಡಾಗಿದ್ದು ಒಂದು ಕಿಡ್ನಿ ಸಂಪೂರ್ಣ ಸ್ತಗಿತಗೊಂಡಿದೆ. ಈಗ ಇನ್ನೊಂದು ಕಿಡ್ನಿ ಕೂಡ ಕೊನೆಯ ಹಂತಕ್ಕೆ ತಲುಪಿದೆ ಎಂದು ವೈದ್ಯರು ತಿಳಿಸಿದ್ದು ವಾರದಲ್ಲಿ 3 ಬಾರಿ ಡಯಾಲಿಸಿಸ್ ಮಾಡುತ್ತಿದ್ದಾರೆ. ತಿಂಗಳಿಗೆ ಸರಿ ಸುಮಾರು 20 ರಿಂದ 30 ಸಾವಿರ ರೂಪಾಯಿ ಆಸ್ಪತ್ರೆಯ ಖರ್ಚು ಬರುತ್ತಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಮಗನಿಗೆ ಬೇಕಾಗಿ ಆ ತಾಯಿ ರಾತ್ರಿ ಹಗಲೆನ್ನದೆ ನೋವು ಅನುಭವಿಸುತ್ತಿದ್ದಾರೆ. ಇಷ್ಟೊಂದು ಖರ್ಚು ಬರುತ್ತಿರುವಾಗ ಈ ತಾಯಿಗೆ ದಿಕ್ಕು ತೋಚದಂತಾಗಿದೆ. ಯಾವುದೇ ಆದಾಯ ಇಲ್ಲದೆ ಆಸ್ಪತ್ರೆಗೆ ಹೋಗಲು ಹಣವಿಲ್ಲದೇ ಮನೆಯಲ್ಲಿಯೇ ನೋವು ಅನುಭವಿಸುತ್ತಿದ್ದು ಇಂತಹ ಸ್ಥಿತಿ ನೋಡುವಾಗ ಎಂತಹ ಕಲ್ಲು ಹೃದಯವೂ ಕರಗಬಹುದು. ದಿಕ್ಕು ತೋಚದ ಈ ಯುವಕನಿಗೆ ಸಹೃದಯಿ ದಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ.

Also Read  ಮಳೆಯಿಂದ ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು ➤ಬೆಳ್ತಂಗಡಿಯಲ್ಲಿ ಸಂಚಾರಕ್ಕೆ ಅಡ್ಡಿ

ಸಹಾಯ ಮಾಡಲಿಚ್ಛಿಸುವವರು 9945556457 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಕೆಳಗೆ ಕೊಟ್ಟಿರುವ ಬ್ಯಾಂಕ್ ಖಾತೆಗೆ ಹಣವನ್ನು ಜಮಾಯಿಸಬಹುದು.

A/c. No. 02482200031555,

IFSC Code: SYNB0000248

Syndicate Bank CCF Puttur

error: Content is protected !!
Scroll to Top