ಇಂದು(ಜ.25) ಕರ್ನಾಟಕ ಬಂದ್ ► ಪರೀಕ್ಷೆಗಳು ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.25. ಮಹದಾಯಿ ವಿಚಾರವಾಗಿ ಗುರುವಾರದಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಇಂದು ನಡೆಯಬೇಕಿದ್ದ ಬಿ.ಎ., ಬಿ.ಕಾಂ., ಬಿ.ಬಿ.ಎಂ., ಬಿಎಸ್ಸಿ ಹಾಗೂ ಪಿ.ಜಿ. ಕೋರ್ಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರಥಮ ವರ್ಷದ ಪದವಿ ಪರೀಕ್ಷೆಗಳು ಫೆಬ್ರವರಿ 8 ರಂದು ನಡೆಯಲಿವೆ. 3 ನೇ ವರ್ಷದ ಬಿ.ಎ., ಬಿ.ಎಸ್ಸಿ. ಪರೀಕ್ಷೆಗಳನ್ನು ಫೆಬ್ರವರಿ 5 ಕ್ಕೆ ಮುಂದೂಡಲಾಗಿದೆ. 3 ನೇ ವರ್ಷದ ಬಿ.ಕಾಂ., ಬಿ.ಬಿ.ಎಂ., ಪರೀಕ್ಷೆಗಳು ಜನವರಿ 31 ರಂದು ನಡೆಯಲಿವೆ. 2 ನೇ ವರ್ಷದ ಎಂ.ಎ., ಎಂ.ಎಸ್ಸಿ. ಪರೀಕ್ಷೆಗಳು ಫೆಬ್ರವರಿ 2 ರಂದು ನಡೆಯಲಿವೆ.

Also Read  ಸಂಘಪರಿವಾರದ ಪ್ರಚೋದನೆಯಿಂದ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿಗಳು ➤ ಪೋಷಕರು ಕೂಡಲೇ ಎಚ್ಚೆತ್ತುಕೊಳ್ಳಲಿ- ಪಾಪ್ಯುಲರ್ ಫ್ರಂಟ್

error: Content is protected !!
Scroll to Top