ವಿಟ್ಲ: ಮಹಿಳೆಯ ಜೊತೆ ಅನುಚಿತ ವರ್ತನೆ ► ಯುವಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜ.24. ಜೆರಾಕ್ಸ್ ಮಾಡಿಸಲೆಂದು ಅಂಗಡಿಗೆ ಬಂದಿದ್ದ ಅನ್ಯ ಕೋಮಿನ ಯುವಕನೋರ್ವ ಅಂಗಡಿ ಮಾಲಕಿಯ ಜತೆ ಅಸಭ್ಯವಾಗಿ ವರ್ತಿಸಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಘಟನೆ ವಿಟ್ಲದಲ್ಲಿ ಬುಧವಾರ ರಾತ್ರಿ ನಡೆದಿದೆ.

ವಿಟ್ಲ – ಮಂಗಳೂರು ರಸ್ತೆಯ ಜೆರಾಕ್ಸ್ ಅಂಗಡಿಯೊಂದಕ್ಕೆ ಬಂದ ಯುವಕನಿಗೆ ಮಹಿಳೆ ವಿದ್ಯುತ್ ಇಲ್ಲದೆ ಇರುವುದರಿಂದ ಬೇರೆ ಅಂಗಡಿಗೆ ತೆರಳಲು ಸೂಚಿಸಿದ್ದಾರೆ. ಆದರೆ ಯುವಕ ಮಹಿಳೆಯ ಮೊಬೈಲ್ ನಂಬರ್ ಕೇಳಿ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಮಹಿಳೆಯು ಅಂಗಡಿಯ ಮುಂಭಾಗದಲ್ಲಿದ್ದ ತನ್ನ ಪತಿಗೆ ಮಾಹಿತಿ ‌ನೀಡಿದ್ದು, ಅವರು ಯುವಕನನ್ನು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸಮಯದಲ್ಲಿ ಕೆಲಕಾಲ ವಿಟ್ಲ ಪರಿಸರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

Also Read  ಉಡುಪಿ: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ತೆರದ ಕಿಡಿಗೇಡಿಗಳು

error: Content is protected !!
Scroll to Top