ಮಾಜಿ ಶಾಸಕ ಸಾ.ರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತನ ಮಗನ ನಡುವೆ ಗಲಾಟೆ

(ನ್ಯೂಸ್ ಕಡಬ) newskadaba.com ಮೈಸೂರು, ಜೂ. 26. ಮಾಜಿ ಸಚಿವ ಸಾ.ರಾ.ಮಹೇಶ್‌ ಪುತ್ರ ಹಾಗೂ ಮೈಸೂರಿನ ಖ್ಯಾತ ಪತ್ರಕರ್ತ ಗುರುರಾಜ್ ಪುತ್ರನ ನಡುವೆ ಕುವೆಂಪು ನಗರದ ಕೆಫೆ ಬಿರಿಯಾನಿ ಹೋಟೆಲ್‌ ಮುಂದೆ ಮಾರಾಮಾರಿ ನಡೆದಿರುವ ಕುರಿತು ವರದಿಯಾಗಿದೆ.

ಇಬ್ಬರು ಕೂಡಾ ಪರಸ್ಪರ ಕೈಕೈ ಮಿಲಾಯಿಸಿಕೊಂಡಿರುವ ದೃಶ್ಯ ವೈರಲ್‌ ಆಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಕೂಡ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಪತ್ರ ಬರೆದು ಬುದ್ದಿ ಹೇಳಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಗಲಾಟೆಗೆ ಕಾರಣವೇನೆಂಬುದು ಇನ್ನೂ ತಿಳಿದು ಬಂದಿಲ್ಲ.

Also Read  ಟೈರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ- ಇಬ್ಬರು ಮೃತ್ಯು

error: Content is protected !!
Scroll to Top