ಹೊಸ ಶಾಸಕರುಗಳಿಗೆ ಇಂದಿನಿಂದ ತರಬೇತಿ ಶಿಬಿರ ➤ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 26. 16ನೇ ವಿಧಾನಸಭೆಯ ನೂತನ ಶಾಸಕರಿಗೆ ಇಂದಿನಿಂದ ಬೆಂಗಳೂರಿನ ನೆಲಮಂಗಲದ ಮಹದೇವಪುರದ ಕ್ಷೇಮವನದಲ್ಲಿ ಮೂರು ದಿನಗಳವರೆಗೆ (ಜೂ. 26 ರಿಂದ ಜೂ.28) ಏರ್ಪಡಿಸಲಾದ ತರಬೇತಿ ಶಿಬಿರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್.ಹೊರಟ್ಟಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರಕುಮಾರ್ ಸೇರಿದಂತೆ ನೂತನ ಶಾಸಕರುಗಳು ಉಪಸ್ಥಿತರಿದ್ದರು.

Also Read  ಚೂರಿಯಿಂದ ಇರಿದು ಯುವಕನ ಕೊಲೆ  

error: Content is protected !!
Scroll to Top