ಭಾರವಾದ ಶಾಲಾ ಬ್ಯಾಗ್‌ ➤ ಬಿದ್ದು ಗಾಯಗೊಂಡ ಆರು ವರ್ಷದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.  26. ಬೆನ್ನಿನಲ್ಲಿದ್ದ ಅತಿಭಾರದ ಶಾಲಾ ಬ್ಯಾಗನ್ನು ಹೊರಲಾಗದೆ ಒಂದನೇ ತರಗತಿಯ ವಿದ್ಯಾರ್ಥಿನಿ ಬಿದ್ದಿರುವ ಘಟನೆ ಮುಡಿಪಿನಲ್ಲಿ ನಡೆದಿದೆ.

ಮಗುವಿನ ಬ್ಯಾಗಿನಲ್ಲಿ ಬರೋಬ್ಬರಿ 19ನೋಟ್‌ ಪುಸ್ತಕಗಳಿದ್ದು 12 ಕೆ.ಜಿ ಭಾರವನ್ನು ಹೊರಲು ಸಾಧ್ಯವಾಗದೆ ಓಡುವ ರಭಸದಲ್ಲಿ ಕೆಳಗೆಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.ಖಾಸಗಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಇಂಟರ್‌ ಲಾಕ್‌ ರಸ್ತೆಗೆ ಬಿದ್ದು ಮೂಗಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ನೋಡಲು ಮಳೆಗೆ ಜಾರಿಬಿದ್ದಿರುವುದಾಗಿ ಕಂಡರೂ, ಮಗುವಿನ ಬೆನ್ನಲ್ಲಿ 12 ಕೆ.ಜಿಯ ಪುಸ್ತಕಗಳಿದ್ದವು.

Also Read  ಎಪ್ರಿಲ್ 1ರಿಂದ ಆಟೋ ಪ್ರಯಾಣ ದರ ಏರಿಕೆ

 

error: Content is protected !!
Scroll to Top