ಕಡಬ: ಅರುಣ್ ಕುಮಾರ್ ಪುತ್ತಿಲ ಭೇಟಿ ➤ ಅಭಿಮಾನಿಗಳಿಂದ ಸ್ವಾಗತ

(ನ್ಯೂಸ್ ಕಡಬ) newskadaba.com ಕಡಬ, ಜೂ. 26. ನಾವು ಧರ್ಮವನ್ನು ಬಿಟ್ಟಿರಲು ಸಾಧ್ಯವಿಲ್ಲ, ಧರ್ಮಾಧರಿತ ರಾಜಕೀಯದಿಂದ ಸಮಸ್ತ ಹಿಂದೂ ಸಮಾಜವನ್ನು ರಕ್ಷಣೆ ಮಾಡಲು ಎಲ್ಲಾ ಕಡೆ ಪ್ರವಾಸ ಮಾಡುತ್ತಿರುವುದಾಗಿ ಅರುಣ್ ಪುತ್ತಿಲ ಹೇಳಿದ್ದಾರೆ. ಭಾನುವಾರದಂದು ಕಡಬ ತಾಲೂಕಿನ ಪ್ರವಾಸ ಕೈಗೊಂಡ ಅವರು, ಬೆಳಗ್ಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರಕ್ಕೆ ಆಗಮಿಸಿ, ಸ್ಟಿಕ್ಕರ್ ಬಿಡುಗಡೆ ಮಾಡಿ ಮಾತನಾಡಿದರು. ಬಳಿಕ ಕಳೆದ ವಾರ ಅಪಘಾತದಲ್ಲಿ ಮೃತಪಟ್ಟ ನಾಗಪ್ರಸಾದ್ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗಿರೀಶ್, ಪ್ರಶಾಂತ್, ದಿನೇಶ್ ಮಾಸ್ತಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.


ಬಳಿಕ ಮರ್ದಾಳಕ್ಕೆ ಹೊರಟ ಅವರನ್ನು ಮರ್ಧಾಳ ಜಂಕ್ಷನ್‌ ನಲ್ಲಿ ಸೇರಿದ ಪುತ್ತಿಲ ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಪುತ್ತಿಲ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಐತ್ತೂರು, ತೀರ್ಥೇಶ್, ಉದಯಕುಮಾರ್, ಸುರೇಶ್ ಓಟೆಕಜೆ, ದಿಶಾಂತ್, ಗಂಗಾಧರ್, ಪ್ರಸಾದ್ ಮೂಜೂರು, ದಿನೇಶ್ ಮೂಜೂರು, ಪೂವಪ್ಪ ಗೌಡ, ಹರೀಶ್ ಗೌಡ, ಹರೀಶ್ ಮೆಫತಪಾಲು, ಚಂದನ್ ಕೈಕುರೆ, ಸುಬ್ರಹ್ಮಣ್ಯ ಕೈಕುರೆ, ದಿವಾಕರ ಕಲ್ಲಾಜೆ, ವಿನೋದ್ ಕಂಪ, ಶಶಿಕುಮಾರ್ ಕೊಲಂತ್ತಾಡಿ, ವಿದ್ಯಾಧರ ಕೇನ್ಯ, ವಸಂತ ಎಡೆಂಜ, ಹರಿಪ್ರಸಾದ್ ಸುಳ್ಯ,ರಂಜಿತ್ ಕೋಕಳ, ಜಯಂತ ಕಾಡುಮನೆ, ಪುರಂದರ ಮರ್ವತ್ತಡ್ಕ, ಶರತ್ ಕೆರ್ಮಾಯಿ, ಯಶೋಧರ ನೀರಾಜೆ, ನಿತೀನ್ ಕೊಣಾಜೆ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು. ಬಳಿಕ ಪುತ್ತಿಲ ಅವರು ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸುಬ್ರಹ್ಮಣ್ಯಕ್ಕೆ ತೆರಳಿ, ಸಂಜೆ ವೇಳೆ ಎಡಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Also Read  ಕೊರೋನಾ ಭೀತಿ ನಡುವೆ ಬಕ್ರೀದ್ ಹಬ್ಬ ➤ ಸರಕಾರದಿಂದ ಮಾರ್ಗಸೂಚಿ ಪ್ರಕಟ

error: Content is protected !!
Scroll to Top