ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಎಥನಾಲ್ ವಾಹನಗಳು ➤ ಸಾರಿಗೆ ಸಚಿವ ನಿತಿನ್ ಗಡ್ಕರಿ

(ನ್ಯೂಸ್ ಕಡಬ) newskadaba.com ನಾಗಪುರ, ಜೂ. 26. ದೇಶದಲ್ಲಿ ಶೀಘ್ರದಲ್ಲೇ ಸಂಪೂರ್ಣ ಎಥನಾಲ್‌ ಇಂಧನದಿಂದ ಸಂಚರಿಸುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಈ ಕುರಿತು ನಾಗಪುರದಲ್ಲಿ ಮಾತನಾಡಿದ ಅವರು, ಸಂಪೂರ್ಣವಾಗಿ 100% ಬಯೋಎಥೆನಾಲ್‌ ನಲ್ಲಿ ಚಲಿಸಬಲ್ಲ ವಾಹನಗಳನ್ನು ಬಜಾಜ್‌, ಟಿವಿಎಸ್‌ ಹಾಗೂ ಹೀರೋ ಸ್ಕೂಟರ್‌ ಕಂಪನಿಗಳು ತಯಾರಿಸಲಿವೆ. ಪ್ರತಿ ಲೀಟರ್‌ ಎಥನಾಲ್‌ ಗೆ 60ರೂ. ಇದ್ದರೆ ಪೆಟ್ರೋಲ್‌ಗೆ 100 ರೂ. ಇದೆ. ಅಲ್ಲದೇ ಎಥನಾಲ್‌ ಶೇ.40ರಷ್ಟು ವಿದ್ಯುತ್‌ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್‌ನ ಸರಾಸರಿ ಬೆಲೆ 15ರೂ. ಆಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

Also Read  ಉಡುಪಿ: ತೈಲ ಸೋರಿಕೆಯಿಂದ ವಾಹನಗಳು ಸ್ಕಿಡ್

error: Content is protected !!
Scroll to Top