ಇಂದಿನಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 26. ರಾಜ್ಯದ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ನೆಲಮಂಗಲದ ಧರ್ಮಸ್ಥಳ ಕ್ಷೇಮವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ.

 

ಇಂದಿನಿಂದ (ಜೂ. 26) ಆರಂಭವಾಗಲಿರುವ ನೂತನ ಸ್ಪೀಕರ್‌ ಯುಟಿ ಖಾದರ್‌ ನೇತೃತ್ವದಲ್ಲಿ ನಡೆಯುವ ಈ ಶಿಬಿರಕ್ಕೆ ಸಿಎಂ ಸಿದ್ದರಾಮಯ್ಯವರು  ಮಧ್ಯಾಹ್ನ 12 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿ ನೂತನವಾಗಿ ಆಯ್ಕೆಯಾಗಿರುವ ಸುಮಾರು 70 ಶಾಸಕರು ತರಬೇತಿ ಪಡೆಯಲಿದ್ದು, ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರ ಜೊತೆಗೆ ಸಂವಾದ ಏರ್ಪಡಿಸಲಾಗಿದೆ. ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ.ವೀಣಾ, ಜಮಾತೆ ಇಸ್ಲಾಂ ಮುಖ್ಯಸ್ಥ ಮಹಮ್ಮದ್‌ ಕುಂಞಿ ಉಪನ್ಯಾಸ ನೀಡಲಿದ್ದಾರೆ.

Also Read  ಉಚಿತ ಕಾನೂನು ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

 

error: Content is protected !!
Scroll to Top