ಮಂಗಳೂರು: ತುಂಬೆ ಡ್ಯಾಂ ನೀರಿನ ಮಟ್ಟ ಹೆಚ್ಚಳ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನೇತ್ರಾವತಿ ನದಿಗೆ ಅಡ್ಡಲಾಗಿರುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ 5 ಮೀ. ನೀರಿನ ಮಟ್ಟ ಏರಿಕೆಯಾಗಿದ್ದು, ಸದ್ಯ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ದೂರವಾಗಿದೆ.

ಸದ್ಯ ನೀರಿನ ಅಭಾವ ಹಿನ್ನಲೆ ಮಂಗಳೂರಿನಲ್ಲಿ ಮೇ. 04ರಿಂದ ನೀರಿನ ರೇಷನಿಂಗ್ ಆರಂಭ ಮಾಡಲಾಗಿತ್ತು. ಮಂಗಳೂರು ನಗರ ಪ್ರದೇಶ, ಸುರತ್ಕಲ್ ಪ್ರದೇಶಕ್ಕೆ ಪರ್ಯಾಯ ದಿನಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು.

Also Read  ನೀರಿನಲ್ಲಿ ಮುಳುಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು..! ಮತ್ತೋರ್ವನ ಸ್ಥಿತಿ ಗಂಭೀರ..!

error: Content is protected !!
Scroll to Top