ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಂಟೇನರ್ ಢಿಕ್ಕಿ ➤ ವೃದ್ದ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 25. ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವೃದ್ದರೋರ್ವರು ಮೃತಪಟ್ಟ ಘಟನೆ ಬಂದ್ಯೋಡಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.


ಮೃತರನ್ನು ಬಂಬ್ರಾಣ ದ ಮೊಯಿದಿನ್ ಕುಂಞ (78) ಎಂದು ಗುರುತಿಸಲಾಗಿದೆ. ಇವರು ಝೀಬ್ರಾ ಲೈನ್ ಮೂಲಕ ರಸ್ತೆ ದಾಟಲೆಂದು ನಿಂತಿದ್ದಾಗ ಅತೀ ವೇಗದಿಂದ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ನವಜಾತ ಹೆಣ್ಣು ಶಿಶು ಪತ್ತೆ

error: Content is protected !!
Scroll to Top