ಮನೆಯಲ್ಲೇ ಗಾಂಜಾ ಬೆಳೆದ ವಿದ್ಯಾರ್ಥಿಗಳು ➤ ಬೆಚ್ಚಿಬಿದ್ದ ಪೊಲೀಸರು

(ನ್ಯೂಸ್ ಕಡಬ) newskadaba.com. ಶಿವಮೊಗ್ಗ, ಜೂ. 25. ತಮಿಳುನಾಡು, ಕೇರಳದ ಮೂವರು ಮೆಡಿಕಲ್ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

 

ತಮಿಳುನಾಡು ಕೃಷ್ಣಗಿರಿಯ ವಿಘ್ನರಾಜ್ (28) ಎಂಬಾತ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು ಶಿವಗಂಗಾ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿದ್ದ. ಇಲ್ಲಿ ಮನೆ ಮಾಲಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ ಪಾಟ್‌ ಗಳಲ್ಲಿ ಗಾಂಜಾ ಬೆಳೆದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಮೂರುವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಇದರಲ್ಲಿ ಯರ‍್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಲಾಗುತ್ತಿದೆ. ಕೇರಳ ಇಡುಕ್ಕಿಯ ವಿನೋದ್ ಕುಮಾರ್ (27), ತಮಿಳುನಾಡು ಧರ್ಮಪುರಿಯ ಪಾಂಡಿದೊರೈ (27) ಎಂಬವರು ಗಾಂಜಾ ಖರೀದಿಗೆ ಬಂದಿದ್ದು ಅವರನ್ನು ಕೂಡ ಬಂಧಿಸಲಾಗಿದೆ. ಈತ ಒಟ್ಟು ಆರು ಲಕ್ಷ ರೂ. ಗಾಂಜಾ ಬೆಳೆಯಲು ವಿನಿಯೋಗಿಸಿದ್ದ ಎಂದು ತಿಳಿದುಬಂದಿದೆ.

Also Read  ಬೆಂಗಳೂರಿನಿಂದ ಶಬರಿಮಲೆಗೆ ಐರಾವತ, ವೋಲ್ವೋ ಬಸ್ ಸೇವೆ ಶುರು

error: Content is protected !!
Scroll to Top