ಕಡಬ- ಶಾಂತಿಮೊಗರು- ಪುತ್ತೂರು ಹೆಚ್ಚುವರಿ ಬಸ್ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜೂ. 24. ಈಗಾಗಲೇ ಕಡಬ- ಶಾಂತಿಮೊಗರು ಮೂಲಕ ಪುತ್ತೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿದೆ. ಆದರೆ ಇದೀಗ ಈ ಬಸ್ಸನ್ನು ಅವಲಂಬಿಸಿರುವವರ ಸಂಖ್ಯೆ ಜಾಸ್ತಿಯಾಗಿದ್ದು ಬಸ್ಸಿನ ಓಡಾಟದ ಸಮಯದಲ್ಲಿ ವ್ಯತ್ಯಾಸವಾಗಿದೆ. ಇದರಿಂದ ಬಸ್ಸು ಸಮಯಕ್ಕೆ ಬಾರದೇ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ರೂಟ್ ನಲ್ಲಿ ಎರಡು ಹೆಚ್ಚುವರಿ ಬಸ್ಸನ್ನು ನಿಯೋಜನೆ ಮಾಡುವಂತೆ ಡಿಪೋ ಮ್ಯಾನೇಜರ್ ಗೆ ದ.ಕ ಜಿಲ್ಲಾ ಏಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕ ರಾಧಾಕೃಷ್ಣ ರೈ ಪರಾರಿಗುತ್ತು, ಆಲಂಕಾರು ಸರಕಾರಿ ಶಾಲಾ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ನೆಕ್ಕರೆ ಮತ್ತು ಅಬ್ಬಾಸ್ ಕೋಚಕಟ್ಟೆ ಮನವಿ ಸಲ್ಲಿಸಿದ್ದಾರೆ.

Also Read  ಬಲ್ಯ: ಮುಖ್ಯ ರಸ್ತೆಯಲ್ಲೇ ಕಾಡಾನೆ ಪ್ರತ್ಯಕ್ಷ

error: Content is protected !!
Scroll to Top