ತೆಲಂಗಾಣ ಶಾಸಕ ಪ್ರಯಾಣಿಸುತ್ತಿದ್ದ ವಾಹನ ಕಾರ್ಕಳದಲ್ಲಿ ಅಪಘಾತ..!

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ. 24. ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ನಡೆದಿದೆ.

ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್‌ ರೆಡ್ಡಿ ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಮುಡಾರು- ನಲ್ಲೂರು ಕ್ರಾಸ್ ಬಳಿ ತಲುಪುತ್ತಿದ್ದಂತೆ ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ. ಘಟನೆಯಿಂದ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ವೇಳೆ ಕಾರು ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ಮಧ್ಯೆ ಸಿಲುಕಿ ಜಖಂಗೊಂಡಿದೆ. ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಬೇರೆ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ. ಇವರು ಹೈದರಾಬಾದ್‌ನಿಂದ ಇಂದು ಬೆಳಗ್ಗೆ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿ, ಅಲ್ಲಿಂದ ಕಾರ್ಕಳ ಮಾರ್ಗವಾಗಿ ಶೃಂಗೇರಿಗೆ ಹೊರಟಿದ್ದರು ಎನ್ನಲಾಗಿದೆ.

Also Read  ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಗಂಭೀರ

error: Content is protected !!
Scroll to Top