ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಸಮವಸ್ತ್ರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಎಲ್ಲಾ 15 ಘಟಕಗಳ ಗೃಹರಕ್ಷಕರಿಗೆ ಕೇಂದ್ರ ಕಛೇರಿ, ಬೆಂಗಳೂರಿನಿಂದ ಒಟ್ಟು 805 ಸಮವಸ್ತ್ರ ಹಾಗೂ ಬೂಟು, ಜರ್ಕಿನ್, ಕ್ಯಾಪ್, ಸೈಡ್ ಬ್ಯಾಡ್ಜ್, ಲಾಠಿ, ಬೂಟು ಪಾಲೀಶ್ ಮುಂತಾದ ಸಾಮಾಗ್ರಿಗಳನ್ನು ಶುಕ್ರವಾರದಂದು ವಿತರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸಾಂಕೇತಿಕವಾಗಿ ಬೆಳ್ತಂಗಡಿ ಘಟಕದ ಗೃಹರಕ್ಷಕ ಅಪ್ಪು ಇವರಿಗೆ ಉಚಿತ ಸಮವಸ್ತ್ರ ಹಾಗೂ ಪೂರಕ ಸಾಮಗ್ರಿಗಳನ್ನು ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರುರವರು ವಿತರಿಸಿದರು ಹಾಗೂ ಎಲ್ಲಾ 15 ಘಟಕಗಳ ಗೃಹರಕ್ಷಕರು ಈ ಸಮವಸ್ತ್ರ ಸಾಮಾಗ್ರಿಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀ ರಮೇಶ್, ಕಛೇರಿ ಅಧೀಕ್ಷಕರಾದ ಶ್ರೀಮತಿ ಕವಿತಾ ಕೆ.ಸಿ., ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್., ಹಾಗೂ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಭಾಸ್ಕರ್, ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಲೋಕೇಶ್ ಮತ್ತು ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ದ.ಕ ಲಾಕ್ ಡೌನ್ ➤ ನಾಳೆ ಸಿ.ಎಂ ಜತೆ ಚರ್ಚಿಸಿ ತೀರ್ಮಾನ- ಸಚಿವ ಕೋಟ ಸ್ಪಷ್ಟನೆ

error: Content is protected !!
Scroll to Top