ಉಪ್ಪಿನಂಗಡಿ: ದ್ವಿಚಕ್ರ ವಾಹನ ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ. 24. ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ಕಟ್ಟಡದ ಪಾರ್ಕಿಂಗ್ ಸ್ಥಳದಿಂದ ದ್ವಿಚಕ್ರ ವಾಹನವೊಂದು ಕಳವಾದ ಘಟನೆ ಜೂ. 19ರಂದು ನಡೆದಿದೆ.


ಅಬ್ದುಲ್ ರಹಿಮಾನ್ ಎಂಬವರು ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕೆಎ 21 ಇಎ 1042 ನೋಂದಣಿಯ ಹೋಂಡಾ ಆಕ್ಟೀವಾ 5ಜಿ ದ್ವಿಚಕ್ರವನ್ನು ಜೂ. 19ರಂದು ಮಧ್ಯಾಹ್ನ 2.30ರಿಂದ 3.30ರ ನಡುವೆ ಕದ್ದೊಯ್ಯಲಾಗಿದೆ. ದ್ವಿಚಕ್ರ ವಾಹನದ ಮೌಲ್ಯವನ್ನು 60 ಸಾವಿರವೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು :ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ ➤ ಆರೋಪಿ ಖಾಕಿ ಬಲೆಗೆ

error: Content is protected !!
Scroll to Top