ಉಳ್ಳಾಲ: ಏಕಾಏಕಿ ಹಿಂದಕ್ಕೆ ಚಲಿಸಿದ ಲಾರಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 23. ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ. 66ರ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ.

ಮೃತ ಚಾಲಕನನ್ನು ಹರ್ಯಾಣ ಮೂಲದ ಶಮೀಮ್ (38) ಎಂದು ಗುರುತಿಸಲಾಗಿದೆ. ಒಂದೇ ಸಂಸ್ಥೆಗೆ ಸೇರಿದ , ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಹರಿಯಾಣದಿಂದ ಕೇರಳ ಕಡೆಗೆ ಸರಕು ಸಾಗಾಟ ಮಾಡುತ್ತಿದ್ದರು. ತಲಪಾಡಿ ಟೋಲ್ ಸಮೀಪ ಚಹಾ ಕುಡಿಯಲೆಂದು ಚಾಲಕ ಶಮೀಮ್ ತನ್ನ ಕಂಟೈನರ್ ಲಾರಿಯನ್ನು ನಿಲ್ಲಿಸಿ ಲಾರಿ ಮುಂದೆ ನಿಂತಿದ್ದರು. ಇದೇ ಸಂದರ್ಭ ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಲಾರಿಯ ಚಾಲಕ, ಶಮೀಮ್ ನಿಲ್ಲಿಸಿದ್ದ ಲಾರಿಯ ಮುಂದೆ ಹೋಗಿ ನಿಲ್ಲಿಸಿದ್ದರು. ಈ ವೇಳೆ ಎದುರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಹಿಂದೆ ಚಲಿಸಿ ಶಮೀಮ್ ಎರಡು ಲಾರಿಗಳ ನಡುವೆ ಸಿಲುಕಿದ್ದಾರೆ. ಗಾಯಗೊಂಡ ಶಮೀಮ್ ರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಒಳಭಾಗದ ಅಂಗಾಂಗಳಿಗೆ ಗಂಭೀರ ರೀತಿಯಲ್ಲಿ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಶಮೀಮ್ ಹಾಗೂ ಅಪಘಾತಕ್ಕೀಡಾದ ಲಾರಿ ಚಾಲಕ ಸಹೋದರ ಸಂಬಂಧಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

Also Read  ಈದ್ ಮೀಲಾದ್ , ಅಯೋಧ್ಯೆ ತೀರ್ಪು , ಟಿಪ್ಪು ಜಯಂತಿ ಹಿನ್ನೆಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ ;ಶಾಂತಿಯುತವಾಗಿ ಹಬ್ಬವನ್ನ ಆಚರಿಸಿ; ಅಯೋಧ್ಯೆ ತೀರ್ಪನ್ನ ಸಮಾನವಾಗಿ ಸ್ವೀಕರಿಸಿ ;ಈರಯ್ಯ ಡಿ ಎನ್ ಕರೆ

error: Content is protected !!
Scroll to Top