(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 23. ಅನ್ನಭಾಗ್ಯ ಯೋಜನೆ ತಡವಾಗಿಯಾದರೂ ಜಾರಿಗೆ ತರುತ್ತೇವೆ. ಈ ಯೋಜನೆ ಜಾರಿ ವಿಚಾರವಾಗಿ ಬಡವರು ಹೋರಾಟ ಮಾಡುತ್ತಿಲ್ಲ, ಬದಲಾಗಿ ಹೊಟ್ಟೆ ತುಂಬಿರುವ ಕೆಲವರು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಕಾರದಿಂದ ನಮಗೆ ಸಹಾಯವಾಗುತ್ತದೆ ಎಂದು ಬಡವರು ಸಂತೋಷದಿಂದ ಇದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯರು ವಿವಿಧೆಡೆಗೆ ಧರ್ಮಯಾತ್ರೆ ಮಾಡುತ್ತಿದ್ದಾರೆ. ಅವರ ಖುಷಿಯನ್ನು ಸಹಿಸಲಾಗದವರು ಒಂದು ಕಾಳು ಅಕ್ಕಿ ಕಡಿಮೆ ಮಾಡಿದರೂ ಹೊರಾಟ ಮಾಡುತ್ತೇವೆ ಎಂದಿದ್ದಾರೆ. ಬಿಎಸ್ವೈ ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ವಿಧಾನಸಭೆಗೆ ಬಂದು ಅವರು ಹೋರಾಟ ಮಾಡಲಿ ಎಂದರು. ಅನ್ನಭಾಗ್ಯ ವಿಚಾರವಾಗಿ ಮುಖ್ಯಮಂತ್ರಿಗಳು ಕೇಂದ್ರ ಸಚಿವ ಅಮಿತ್ ಶಾ ಆವರನ್ನು ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.