ಮದ್ಯ ಸೇವಿಸಿ ಫುಲ್ ಟೈಟಾದ ಪೊಲೀಸರು ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ರಾಮನಗರ, ಜೂ. 23. ಕರ್ತವ್ಯ ನಿರತ ಮಾಗಡಿ ಪೊಲೀಸರು ಕಂಠಪೂರ್ತಿ ಕುಡಿದುಬಂದು ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿದ ಪ್ರಸಂಗ ರಾಮನಗರದಲ್ಲಿ ನಡೆದಿದೆ.

ಮಾಗಡಿ ಠಾಣೆಯ ಎಎಸ್ಐ ಮತ್ತು ಕ್ರೈಂ ಪಿಸಿ ಸಹಿತ ಮತ್ತಿಬ್ಬರು ಮೋಜುಮಸ್ತಿ ಮಾಡಿದ್ದಾರೆ. ಮಾಗಡಿ ಠಾಣೆಯಲ್ಲಿದ್ದ ಕೈದಿಯನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಬಿಡಲು ಬಂದಿದ್ದ ಪೊಲೀಸರು ಮಾಗಡಿಗೆ ಹಿಂತಿರುಗುವಾಗ ಫುಲ್ ಟೈಟ್ ಆಗಿದ್ದು, ಮೈಮೇಲೆ ಪ್ರಜ್ಞೆ ಇಲ್ಲದ ಪೊಲೀಸರು ಸಮವಸ್ತ್ರವನ್ನು ಕಳಚಿಟ್ಟಿದ್ದರು. ಈ ವೇಳೆ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿದ್ದ ಇವರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೀಡಿಯೋ ವನ್ನು ಕಾರಿನಲ್ಲಿದ್ದವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ. ಸದ್ಯ ಈ ವೀಡಿಯೊ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Also Read  ನಾಳೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಪ್ರಾರಂಭ

error: Content is protected !!
Scroll to Top