ಸುಬ್ರಹ್ಮಣ್ಯ: ಗೂಡ್ಸ್ ರೈಲಿನಡಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 23. ರೈಲ್ವೇ ಹಳಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೆಟ್ಟಣದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕಡಬ ತಾಲೂಕಿನ ಐನೆಕಿದು ಗ್ರಾಮದ ಪೈಲಾಜೆ ನಿವಾಸಿ ಧರ್ಮರಾಜ ಮುತ್ಲಾಜೆ (45) ಎಂದು ಗುರುತಿಸಲಾಗಿದೆ. ಎಲಿಮಲೆಯ ರಬ್ಬರ್ ಪ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದ ಅವರು ಕೆಲ ಸಮಯದಿಂದ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದರು ಎಂದೆನ್ನಲಾಗಿದ್ದು, ಇದೀಗ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Also Read  ಬೈಕ್ ಮತ್ತು ಕಾರಿನ ನಡುವೆ ಅಪಘಾತ ➤ ಅಬಕಾರಿ ಸಿಬ್ಬಂದಿ ಮೃತ್ಯು

error: Content is protected !!
Scroll to Top