ನಿಧಿಯಾಸೆಗೆ 15 ಅಡಿ ಆಳದ ಗುಂಡಿ ತೋಡಿದ ಕಿಡಿಗೇಡಿಗಳು ➤ ಸ್ಥಳದಲ್ಲಿ ಉಡುಪಿ ನೋಂದಣಿಯ ಕಾರು ಪತ್ತೆ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 23. ನಿಧಿ ಶೋಧದ ತಂಡವೊಂದು ನಿರ್ಜನ ಪ್ರದೇಶದಲ್ಲಿ ಸುಮಾರು 10 ಅಡಿ ಅಗಲ, 15 ಅಡಿ ಆಳದ ಗುಂಡಿ ತೋಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ‌ ಗ್ರಾಮದಲ್ಲಿ ನಡೆದಿದೆ.

 

ಗುಂಡಿ ತೋಡಲು ನಿಧಿ ಶೋಧ ತಂಡವು ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದು, ಕೆಸರಿಕೆ ಗ್ರಾಮದಲ್ಲಿ ಪೂಜೆ ನಡೆಸಿದ್ದು, ಇನ್ನು ಘಟನಾ ಸ್ಥಳದಲ್ಲಿ ಅರಿಶಿಣ-ಕುಂಕುಮ, ಕುಂಬಳಕಾಯಿ, ಕೋಳಿ, ಕಾಯಿ, ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳಿದಾಗ ತಂಡ ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

Also Read  ಶಾಸಕರ ಹಗ್ಗ-ಜಗ್ಗಾಟಕ್ಕೆ ತೆರೆ - ಬಳ್ಳಾರಿಗೆ ನೂತನ ಜಿಲ್ಲಾಧಿಕಾರಿ ಆಯ್ಕೆ

error: Content is protected !!