ಮನೆಗೆ ನುಗ್ಗಿ ಕಳ್ಳರ ಕೈಚಳಕ, ನಗ-ನಗದು ಕಳವು ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜೂ. 23. ಮನೆಗೆ ನುಗ್ಗಿದ ಕಳ್ಳರು ಸುಮಾರು 60 ಪವನ್ ಚಿನ್ನಾಭರಣ ಮತ್ತು 50 ಸಾವಿರ ರೂ.ನಗದು ಕಳವು ಮಾಡಿರುವ ಕುರಿತು ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಜೇಶ್ವರ ರಾಗಂ ಜಂಕ್ಷನ್ ನ ಹಮೀದ್ ರವರ ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಏರ್ವಾಡಿಗೆ ತೆರಳಿದ್ದು, ಗುರುವಾರದಂದು ಸಂಜೆ ಮರಳಿ ಬಂದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಮುರಿದು ಈ ಕೃತ್ಯ ನಡೆಸಿದ್ದಾರೆ. ಈ ಕುರಿತು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Also Read  ಪುತ್ತೂರು: ಬೈಕ್ ಢಿಕ್ಕಿ- ಬಾಲಕನಿಗೆ ಗಾಯ ➤ ಮಾನವೀಯತೆ ಮೆರೆದ ಕಾಂಗ್ರೆಸ್ ವಲಯಾಧ್ಯಕ್ಷ

error: Content is protected !!
Scroll to Top