ದೀಪಕ್ ರಾವ್ ಕೊಲೆ ಪ್ರಕರಣ. ► ಆರು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.24. ಇತ್ತೀಚೆಗೆ ಹಾಡುಹಗಲೇ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಂಚು ರೂಪಿಸಿ ಪ್ರಮುಖ ಆರೋಪಿಗಳಿಗೆ ಸಹಾಯ ಮಾಡಿರುವ ಆರೋಪದಲ್ಲಿ ಮತ್ತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಚು ಹಾಗೂ ಕೃತ್ಯಕ್ಕೆ ನೆರವು ನೀಡಿದ ಆರೋಪದಲ್ಲಿ ಚೊಕ್ಕಬೆಟ್ಟುವಿನ ಮುಹಮ್ಮದ್ ರಫೀಕ್, ಇರ್ಫಾನ್, ಕಾಟಿಪಳ್ಳದ ಮುಹಮ್ಮದ್ ಅನಸ್, ಮುಹಮ್ಮದ್ ಝಾಹೀದ್, ಹಿದಾಯಿತುಲ್ಲಾ ಹಾಗೂ ಚೊಕ್ಕಬೆಟ್ಟುವಿನ ಇಮ್ರಾನ್ ರನ್ನು ಬಂಧಿಸಲಾಗಿದೆ ಎಂದರು. ಪ್ರಮುಖ ಆರೋಪಿಗಳಾದ ಮುಹಮ್ಮದ್ ನೌಷಾದ್, ಮುಹಮ್ಮದ್ ಇರ್ಷಾನ್, ಅಬ್ದುಲ್ ಅಝೀಝ್,‌ ನವಾಝ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು. ಆರೋಪಿಗಳ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

Also Read  ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹುದ್ದೆ ➤ವಿಕಲಚೇತನರಿಂದ ಅರ್ಜಿ ಆಹ್ವಾನ

error: Content is protected !!
Scroll to Top