ಮಂಗಳೂರು: ಇನ್ಸ್ಟಾಗ್ರಾಂ ಮೂಲಕ ಪಾರ್ಟ್ ಟೈಂ ಉದ್ಯೋಗದ ಹೆಸರಲ್ಲಿ ವಂಚನೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಇನ್ ಸ್ಟಾಗ್ರಾಮ್ ಖಾತೆಗೆ ಬಂದ ಪಾರ್ಟ್ ಟೈಮ್ ಉದ್ಯೋಗದ ಮೆಸೇಜ್ ನಂಬಿ ವ್ಯಕ್ತಿಯೊಬ್ಬರು 1,73,190 ರೂ. ಕಳೆದುಕೊಂಡಿರುವ ವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರದಾರನ ಹೆಂಡತಿಯ ಇನ್ಸ್ಟಾಗ್ರಾಮ್ ಖಾತೆಗೆ ಅಪರಿಚಿತನೊಬ್ಬ ಪಾರ್ಟ್‌ಟೈಮ್ ಉದ್ಯೋಗದ ಬಗ್ಗೆ ಸಂದೇಶ ಕಳುಹಿಸಿದ್ದ. ಇದನ್ನು ವಿಚಾರಿಸಿದಾಗ ಅಪರಚಿತ ವ್ಯಕ್ತಿ ವಾಟ್ಸ್‌ ಆಪ್ ಮೂಲಕ ಮೆಸೇಜ್ ಮಾಡುವಂತೆ ಸೂಚಿಸಿದ್ದ. ಅದರಂತೆ ತಾನು ಮೆಸೇಜ್ ಕಳುಹಿಸಿದಾಗ ಆತ ಟೆಲಿಗ್ರಾಮ್ ವೆಬ್‌ಸೈಟ್ ಲಿಂಕ್ ಕಳುಹಿಸಿ ಅದರಲ್ಲಿ ರಿಜಿಸ್ಟರ್ ಮಾಡುವಂತೆ ತಿಳಿಸಿದ್ದಲ್ಲದೇ ಟೆಲಿಗ್ರಾಮ್ ಆ್ಯಪ್ ಡೌನ್ ಲೋಡ್ ಮಾಡಿಸಿ ಟೆಲಿಗ್ರಾಮ್ ಐಡಿ ಸಂಪರ್ಕಿಸುವಂತೆ ಸೂಚಿಸಿದ. ಸದ್ರಿ ಟೆಲಿಗ್ರಾಂ ಖಾತೆದಾರರನ್ನು ಸಂಪರ್ಕಿಸಿದಾಗ ಆ್ಯಪ್ ಡೌನ್‌ಲೋಡ್ ಮಾಡಿ ಅದರಲ್ಲಿ ಲಾಗಿನ್ ಆಗಿ ಬ್ಯಾಂಕ್ ಖಾತೆಯಿಂದ 500 ರೂ. ಹಣವನ್ನು ಪಾವತಿಸುವಂತೆ ಹೇಳಿ ಅದಕ್ಕೆ 550 ರೂ. ಮರು ಪಾವತಿಸಿದ್ದ. ಹೀಗೆ ಬೇರೆ ಬೇರೆ ನೆಪದಲ್ಲಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1,73,190 ರೂ.ಗಳನ್ನು ವರ್ಗಾಯಿಸಿಕೊಂಡು ಮರುಪಾವತಿ ಮಾಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read  ಬಸ್ಸುಗಳೆರಡು ಡಿಕ್ಕಿ ಆಶ್ಚರ್ಯಗೊಂಡ ಪ್ರಯಾಣಿಕರು

error: Content is protected !!
Scroll to Top