ಜಲಾಂತರ್ಗಾಮಿ ನೌಕೆಯಲ್ಲಿದ್ದ ಐವರು ಮೃತ್ಯು ➤ ಅಧಿಕೃತ ಹೇಳಿಕೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಜೂ. 23. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿಯಾಗಿರುವ ಬಗ್ಗೆ ಓಶಿಯನ್ ಗೇಟ್ ಸಂಸ್ಥೆ ಖಚಿತ ಪಡಿಸಿದೆ.

ಮೃತರನ್ನು ಸಾಹಸಯಾತ್ರೆಯ ಅಂಗವಾಗಿ ತೆರಳಿದ್ದ ಬ್ರಿಟನ್​ ನ ಶ್ರೀಮಂತ ಉದ್ಯಮಿ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಫ್ರಾನ್ಸ್‌ ನ ನಿವೃತ್ತ ನೌಕಾಪಡೆ ಅಧಿಕಾರಿ ಪೌಲ್‌ ಹೆನ್ರಿ ನಾರ್ಗೊಲೆಟ್‌, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್, ಓಷನ್‌ ಗೇಟ್‌ ಕಂಪನಿಯ ಸಿಇಒ ಸ್ಟಾಕ್‌ಟನ್‌ ರಶ್‌ ಎಂದು ಗುರುತಿಸಲಾಗಿದೆ. ನೌಕೆಯಲ್ಲಿದ್ದ 92 ಗಂಟೆಗಳ ಕಾಲ ಬೇಕಾಗುವ ಆಮ್ಲಜನಕವು ಬುಧವಾರ ರಾತ್ರಿ 7.30ರ ವೇಳೆಗೆ ಮುಗಿದಿತ್ತು.

Also Read  ದ್ವಿಚಕ್ರ ವಾಹನ ಸವಾರರಿಗೆ ಕೇಂದ್ರದಿಂದ ಹೊಸ ರೂಲ್ಸ್ ➤ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ...!!!

error: Content is protected !!
Scroll to Top