ವಿಶ್ವಕಪ್ 2023 ➤ ಅಫ್ಘಾನ್ ವಿರುದ್ದ ಆಡಲು ನಿರಾಕರಿಸಿದ ಪಾಕಿಸ್ತಾನ

(ನ್ಯೂಸ್ ಕಡಬ) newskadaba.com ಪಾಕಿಸ್ತಾನ, ಜೂ. 22. ಈ ಮೊದಲು 2023ರ ವಿಶ್ವಕಪ್ ಪಂದ್ಯವನ್ನು ಪ್ರಧಾನಿ ಮೋದಿ ಮೈದಾನದಲ್ಲಿ ಆಡುವುದಿಲ್ಲ, ವೇಳಾಪಟ್ಟಿಯಲ್ಲಿ 2 ಸ್ಥಳಗಳನ್ನು ಬದಲಾಯಿಸಬೇಕು ಎಂದಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದ್ದಲ್ಲದೇ ಈ ಬಗ್ಗೆ ತನ್ನ ಲಿಖಿತ ಬೇಡಿಕೆಯನ್ನು ಐಸಿಸಿಗೆ ಕಳುಹಿಸಿದೆ ಎಂದು ವರದಿಯಾಗಿದೆ.

ಇನ್ನು ಏಷ್ಯನ್ ಅಲ್ಲದ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಯೋಜಿಸಲು ಮನವಿ ಮಾಡಿದ್ದು, ಇದಕ್ಕೆ ಕಾರಣವನ್ನೂ ನೀಡಿರುವ ಪಾಕ್, ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಿರುತ್ತದೆ. ಹೀಗಾಗಿ ಅಭ್ಯಾಸ ಪಂದ್ಯವನ್ನು ಏಷ್ಯನ್ ಅಲ್ಲದ (ಪ್ರಮುಖವಾಗಿ ಭಾರತ, ಶ್ರೀಲಂಕಾ, ಅಪ್ಘಾನಿಸ್ತಾನ) ರಾಷ್ಟ್ರಗಳ ವಿರುದ್ಧ ಆಡುವ ಮನವಿಯನ್ನು ಐಸಿಸಿ ಮುಂದಿರಿಸಿದೆ ಎಂದು ಹೇಳಿದೆ.

Also Read  ಪ್ರಧಾನಿ ನರೇಂದ್ರ ಮೋದಿ ಪ್ರಚಂಡ ಚುನಾವಣಾ ವಿಜಯಕ್ಕೆ ಫ್ರಾನ್ಸ್ ಅಧ್ಯಕ್ಷರಿಂದ ಅಭಿನಂದನೆ

error: Content is protected !!
Scroll to Top