ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು ವಿತರಣೆ ➤ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶೇ.50ರ ಸಹಾಯದಲ್ಲಿ ಪ್ರತಿ ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು (COW MAT) ವಿತರಿಸಲು ಅರ್ಹ ಹೈನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಘಟಕ ವೆಚ್ಚ 5,598 ರೂ.ಗಳು ಕನಿಷ್ಠ ಎರಡು ಜಾನುವಾರುಗಳನ್ನು ಹೊಂದಿರುವ ಆಸಕ್ತ ಹೈನುಗಾರರು ಪಶುಪಾಲನಾ ಇಲಾಖೆಯ ತಾಲೂಕಾ ಮುಖ್ಯ ಪಶುವೈದ್ಯ ಅಧಿಕಾರಿ (ಆಡಳಿತ) ಸಂಪರ್ಕಿಸಿ 2023ರ ಜು. 05ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಬಂಟ್ವಾಳ-9481445365, ಬೆಳ್ತಂಗಡಿ-9448533922, ಮಂಗಳೂರು-9243306956, ಉಳ್ಳಾಲ-9019198507, ಮುಲ್ಕಿ-8971024282, ಮೂಡಬಿದ್ರೆ-7204271943, ಪುತ್ತೂರು-9448624950, ಕಡಬ-9483922594, ಮತ್ತು ಸುಳ್ಯ-9488995078 ಮೊಬೈಲ್ ಸಂಪರ್ಕಿಸುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ► ಕಳಪೆ ಕಾಮಗಾರಿ

error: Content is protected !!
Scroll to Top