ಮಂಗಳೂರು: ಜೂ. 24ರಿಂದ ಹಲಸು ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಹತ್ತಿರದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇದೇ ಜೂ.24 ಹಾಗೂ 25ರಂದು ‘ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ’ವನ್ನು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಪ್ರಾದೇಶಿಕ ಹಲಸು, ಮಾವು ಹಾಗೂ ಇತರೆ ಹಣ್ಣುಗಳಲ್ಲದೆ ರಾಜ್ಯದ ನಾನಾ ಕಡೆಯ ಮೌಲ್ಯವರ್ಧಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಔಷಧೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಸಾವಯವ ಬಳಗದ ವಿವಿಧ ಆಹಾರ ಮತ್ತಿತರ ಪದಾರ್ಥಗಳು, ಬೇರೆ ಬೇರೆ ಹಣ್ಣುಗಳ ವಿವಿಧ ಖಾದ್ಯಗಳು ಹಾಗೂ ಪಾನೀಯಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ. ಸಂಖ್ಯೆ : 7349212817, 9686673237 ಮತ್ತು 9480229764 ಅನ್ನು ಸಂಪರ್ಕಿಸಬಹುದು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಪ್ರೋತ್ಸಾಹ ಧನ

error: Content is protected !!
Scroll to Top