ಯೋಗದಿಂದ ರೋಗ ದೂರವಾಗುತ್ತದೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ದಿನವಿಡೀ ನಿಂತುಕೊಂಡು 8ರಿಂದ 12 ಗಂಟೆಯ ಕಾಲ ಕೆಲಸ ಮಾಡುವ ಗೃಹರಕ್ಷಕರಿಗೆ ದೈಹಿಕ ಆರೋಗ್ಯ ಅತೀ ಅಗತ್ಯ. ಟ್ರಾಫಿಕ್ ನಿಯಂತ್ರಣ, ನೆರೆ ನಿಯಂತ್ರಣ ಮತ್ತು ಬೆಂಕಿ ಅವಘಡ ಮುಂತಾದ ಒತ್ತಡದ ಸಂದರ್ಭದಲ್ಲಿ ಕೆಲಸ ನಿರ್ವಹಿಸುವಾಗ ಗೃಹರಕ್ಷಕರಿಗೆ ವಿಪರೀತ ಮಾನಸಿಕ ಒತ್ತಡದ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅತೀ ಅವಶ್ಯಕ. ನಿರಂತರ ಯೋಗ ಮಾಡುವುದರಿಂದ ಜೀವನ ಶೈಲಿ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಮುಂತಾದ ರೋಗಗಳು ದೂರವಾಗುತ್ತದೆ. ಈ ಕಾರಣದಿಂದ ನಿರಂತರವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಯೋಗ ತರಬೇತಿ ನಡೆಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಗೃಹರಕ್ಷಕರಿಗೆ, ಅವರ ದೈಹಿಕ ಮತ್ತು ಮಾನಸಿಕ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ‘ಯೋಗ’ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಮತ್ತು ಪೌರರಕ್ಷಣಾದಳದ ಮುಖ್ಯ ಪಾಲಕ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.

Also Read  "ನಡುಕ ಹುಟ್ಟಿಸುತ್ತಿರುವ ನಿಫಾ ವೈರಾಣು" - ಡಾ. ಚೂಂತಾರು

ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬುಧವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಯೋಗ ಶಿಬಿರ ಜರುಗಿತು. ಯೋಗ ಶಿಕ್ಷಕಿ ಸುಮಾ ಇವರ ಸಹಕಾರದೊಂದಿಗೆ ಈ ಶಿಬಿರ ನಡೆಯಿತು. 25 ಮಂದಿ ಗೃಹರಕ್ಷಕರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top