ನಿತ್ಯ ನಿರಂತರವಾಗಿ ಯೋಗ ಮಾಡಿದರೆ ಆರೋಗ್ಯವಂತರಾಗಬಹುದು ➤ ಕಿರಣ್ ಗೋಗಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಸುಖವಾಗಿ ಬಾಳಬೇಕಾದರೆ ಆರೋಗ್ಯ ಮುಖ್ಯ ಅದಕ್ಕಾಗಿ ಯೋಗ ಪೂರಕವಾಗಿದೆ. ಭಾರತದಲ್ಲಿ ಎಲ್ಲವೂ ಇದೆ ಆದರೆ, ಅದನ್ನು ಬಳಸಿಕೊಳ್ಳುವುದಿಲ್ಲ. ನಿತ್ಯ ನಿರಂತರವಾಗಿ ಯೋಗ ಮಾಡಿದರೆ, ಆರೋಗ್ಯವಂತರಾಗಬಹುದು. ಈ ಕಾರ್ಯಕ್ರಮಕ್ಕೆ ಆಗಮಿಸಿ ಮಾನಸಿಕ ನೆಮ್ಮದಿ ಸಿಕ್ಕಿತು ಎಂದು ಅಧ್ಯಕ್ಷರು ಹಾಲು ಉತ್ಪಾದಕರ ಒಕ್ಕೂಟ, ಕುಟ್ರುಪ್ಪಾಡಿ ಹಾಗೂ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕಿರಣ್ ಗೋಗಟೆ ಹೇಳಿದರು. ಅವರು ಕಡಬದ ಕೇವಳ ಹನುಮಾನ್ ನಗರದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಜಂಟಿಯಾಗಿ ನಡೆಸಿದ ವಿಶ್ವಯೋಗ ದಿನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಕಡಬ ಇವರು ಸನಾತನ ಧರ್ಮದಲ್ಲಿನ ಪರಂಪರೆಯನ್ನು ಇಡೀ ಜಗತ್ತಿಗೆ ತೋರಿಸಿ ಕೊಡುವಲ್ಲಿ ಯೋಗ ಮುಖ್ಯವಾಗಿದೆ ಎಂದು ಅಧ್ಯಕ್ಷ ನುಡಿಗಳನ್ನಾಡಿದರು. ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ನಿರ್ದೇಶಕರು, ಪ್ರೌಢ ವಿಭಾಗದ ಮೇಲ್ವೀಚಾರಕರಾದ ಶ್ರೀಮತಿ ಪುಲಸ್ತ್ಯಾ ರೈ ಮನಸು ಮತ್ತು ಶರೀರ ದ ಮಾಲಿನ್ಯವನ್ನು ಹೋಗಲಾಡಿಸಲು ಯೋಗ ಅವಶ್ಯಕ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ವತಿಯಿಂದ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಬ್ಯಾಗ್ ಮತ್ತು ಕಲೀಕೋಪಕರಣಗಳನ್ನು ಉಚಿತವಾಗಿ ನೀಡಿದ್ದರು, ಇದನ್ನು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭವ್ಯಶ್ರೀ ಕೆ ಸ್ವಾಗತಿಸಿ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್ ವಂದನಾರ್ಪಣೆಗೈದರು. ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕಿ ದಿವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಕುಂತೂರು: ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಬದ್ರುನ್ನಿಶಾರಿಗೆ ನಾಗರಿಕರಿಂದ ಸನ್ಮಾನ

error: Content is protected !!
Scroll to Top