ವ್ಯಕ್ತಿಯನ್ನು ಅರ್ಧ ಮಣ್ಣಿನಲ್ಲಿ ಹೂತು ಉಳಿದರ್ಧಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ► ಕಾಫಿ ನಾಡಿನಲ್ಲಿ ವ್ಯಕ್ತಿಯ ಸಜೀವ ದಹನ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.24. ವ್ಯಕ್ತಿಯ ಅರ್ಧ ದೇಹವನ್ನು ಮಣ್ಣಲ್ಲಿ ಹೂತು ಹಾಕಿ, ಉಳಿದ ಭಾಗಕ್ಕೆ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ಮಂಗಳವಾರದಂದು ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಮೂಡಿಗೆರೆ ತಾಲ್ಲೂಕಿನ ಕನ್ನಹಳ್ಳಿ ನಿವಾಸಿ ಸಂಜೀವ್ ಕುಮಾರ್(45) ಎಂದು ಗುರುತಿಸಲಾಗಿದೆ. ಸಂಜೀವ್ ಕುಮಾರ್ ಅರ್ಧ ದೇಹವನ್ನು ಮಣ್ಣಿನಲ್ಲಿ ಹೂಳಲಾಗಿದ್ದು, ಉಳಿದ ಭಾಗಕ್ಕೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆಗೈಯಲಾಗಿದೆ‌
ಸ್ಥಳೀಯರು ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

Also Read  ಕರಾವಳಿ ಜಿಲ್ಲೆಯ ನಗರಾಭಿವೃದ್ದಿ ಕಟ್ಟಡಗಳ ಸಕ್ರಮ

error: Content is protected !!
Scroll to Top