ಬಿಳಿನೆಲೆ: ವಿಶ್ವ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ರಿಜಿಸ್ಟರ್ ಸುಬ್ರಮಣ್ಯ ಇದರ ಅಂಗಸಂಸ್ಥೆಯಾದ ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಇಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಬುಧವಾರದಂದು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಕೃಷ್ಣ ಶರ್ಮ ಕಾರ್ಯದರ್ಶಿಗಳು, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ (ರಿ) ಇವರು ಮಾತನಾಡಿ, ಯೋಗವು ಮಾನವನ ಸರ್ವಾಂಗೀಣ ಬೆಳವಣಿಗೆಗೆ ಹಾಗೂ ಆರೋಗ್ಯಕರ ಜೀವನವನ್ನು ನೀಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಯೋಗದ ಪ್ರಕಾರಗಳನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸುಬ್ರಮಣ್ಯ ಅದರ ಸದಸ್ಯರಾದ ಗಾಯತ್ರಿ ವೆಂಕಟೇಶ್ ನಾಗರಾಜ ಸುಬ್ರಮಣ್ಯ ಇವರು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಭಾಕರ ಪಡ್ರೆ, ವಿಶ್ವನಾಥ್ ತೋಟ, ನಾಗರಾಜ ಸುಬ್ರಮಣ್ಯ, ಕುಮಾರಣ್ಣ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗುರುಪ್ರಸಾದ್ ಭಟ್ ಶಿಕ್ಷಕರು ನಿರೂಪಿಸಿದರು. ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಶಾಂತ್ ಇವರು ವಂದಿಸಿದರು.

Also Read  ಮಂಗಳೂರು: ಸಿಎಂ ಗೆ ತಪ್ಪಿನ ಅರಿವಾದಂತಿದೆ-ಸಂಸದ ಚೌಟ

error: Content is protected !!
Scroll to Top