ಮಂಗಳೂರು: ಮಲಮಗಳ ಮೇಲೆ ಅತ್ಯಾಚಾರ ಪ್ರಕರಣ ➤ ಆರೋಪಿಗೆ 20 ವರ್ಷ ಜೈಲುಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ FTSC || (POCSO) ನ್ಯಾಯಾಲಯವು ಆರೋಪಿ ಮಲತಂದೆಗೆ 20 ವರ್ಷ ಜೈಲುಶಿಕ್ಷೆ ಪ್ರಕಟಿಸಿದೆ.

ಶಿಕ್ಷೆಗೊಳಗಾದ ಆರೋಪಿಯನ್ನು ಅಶ್ವತ್ಥ್ ಎಂದು ಗುರುತಿಸಲಾಗಿದೆ. ಈತ ತನ್ನ ಮೊದಲ ಪತ್ನಿ ಹೆರಿಗೆಗೆ ಹೋಗಿದ್ದ  ವೇಳೆ ಮನೆಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದಿದಲ್ಲದೇ, ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಕೊಲ್ಲುವುದಾಗಿಯೂ ಬೆದರಿಸಿದ್ದ ಎಂಬುವುದಾಗಿ ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ FTSC || ನ್ಯಾಯಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Also Read  ನರೇಂದ್ರಮೋದಿ,ಯೋಗಿಯನ್ನು ಅಧಿಕಾರದಿಂದ ಇಳಿಸುವ ವರೆಗೆ ಎಸ್ ಪಿ - ಬಿಎಸ್ ಪಿ ಮೈತ್ರಿ

error: Content is protected !!
Scroll to Top