(ನ್ಯೂಸ್ ಕಡಬ) newskadaba.com ಶ್ರೀರಂಗಪಟ್ಟಣ, ಜೂ. 22. ಹೆತ್ತ ತಂದೆಯೇ ತನ್ನಿಬ್ಬರ ಮಕ್ಕಳನ್ನು ಕೊಂದು ಹಾಕಿದ ಘಟನೆ ಶ್ರೀರಂಗಪಟ್ಟಣದ ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್ನಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಆದರ್ಶ ಹಾಗೂ ಅಮೂಲ್ಯ ಎಂದು ಗುರುತಿಸಲಾಗಿದೆ ಪತಿ ಪತ್ನಿ ನಡುವೆ ಕಲಹವೇರ್ಪಟ್ಟು, ಪತಿ, ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಏಟು ಬಿದ್ದ ತಕ್ಷಣ ಲಕ್ಷ್ಮೀ ಕೆಳಗೆ ಬಿದ್ದಿದ್ದು, ಬಳಿಕ ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪತ್ನಿ ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಆರೋಪಿ ಶ್ರೀಕಾಂತ್ (29) ಪರಾರಿಯಾಗಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.