ಸುಳ್ಯ: ಕಂಟೇನರ್ ಲಾರಿ ಹಾಗೂ ಕಾರು ಢಿಕ್ಕಿ ➤ ಕಾರು ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 22. ಕಾರು ಹಾಗೂ ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಸಂಪಾಜೆ ಸಮೀಪ ದೇವರಕೊಲ್ಲಿಯಲ್ಲಿ ಬುಧವಾರದಂದು ರಾತ್ರಿ ಸಂಭವಿಸಿದೆ.

 


ಮೃತ ಕಾರು ಚಾಲಕನನ್ನು ಬೆಂಗಳೂರಿನ ರವಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಲಾರಿ ಚಾಲಕ ಮಂಗಳೂರಿನ ಕುಳಾಯಿ ನಿವಾಸಿ ಈಶ್ವರ (42), ಕಾರಿನಲ್ಲಿದ್ದ ಚಂದ್ರಶೇಖರ, ನಿತಿನ್‌, ಜಗದೀಶ್‌ ಹಾಗೂ ಹರ್ಷ ಎಂಬವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಕಂಟೈನರ್‌ ಲಾರಿ ಬ್ರೇಕ್‌ ವೈಫ‌ಲ್ಯಗೊಂಡು ಮುಂದೆ ಹೋಗುತ್ತಿದ್ದ ಕಾರಿಗೆ ಢಿಕ್ಕಿಯಾಗಿ ಪಲ್ಟಿಯಾಗಿತ್ತು. ಘಟನೆಯಲ್ಲಿ ಕಾರು ಹಾಗೂ ಕಂಟೈನರ್‌ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ವಿಕಲಚೇತನ ನೌಕರರ ಸಂಘದ ಅಧ್ಯಕ್ಷರಾಗಿ ಶಿವಪ್ಪ ರಾಥೋಡ್ ನೇಮಕ

error: Content is protected !!
Scroll to Top