ಮಂಗಳೂರು: ಬಕ್ರೀದ್ ಸಂದರ್ಭ ಕುರ್ಬಾನಿ ➤ ಗೋಹತ್ಯೆ, ಅಕ್ರಮ ಗೋಸಾಗಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತಕ್ಕೆ ವಿಹೆಚ್ ಪಿ ನ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 21. ಇದೇ ಜೂನ್ 29 ರಂದು ಬಕ್ರೀದ್ ಸಂದರ್ಭ ಕುರ್ಬಾನಿ ನಡೆಸುವ ಸಾಧ್ಯತೆ ಇದ್ದು, ಈ ದಿನದಂದು ಮತ್ತು ಇತರೆ ದಿನಗಳಂದು ಯಾವುದೇ ರೀತಿಯ ಗೋವಧೆ /ಬಲಿ/ ಕುರ್ಬಾನಿ/ ಹತ್ಯೆ ಹಾಗು ಅಕ್ರಮ ಗೋಸಾಗಾಟವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವಿಹೆಚ್‌ಪಿ ನಿಯೋಗ ಮನವಿ ಸಲ್ಲಿಸಿದೆ.

ಗೋವುಗಳನ್ನು ಮನೆಗಳಿಂದ, ಬೀದಿಗಳಿಂದ ಹಾಗೂ ಗುಡ್ಡೆಗಳಿಂದ ಕಳ್ಳತನವಾಗದಂತೆ ಆಹೋ ರಾತ್ರಿ ಗಸ್ತು ಹಾಗು ಅಗತ್ಯ ಇದ್ದಲ್ಲೆಲ್ಲ ನಾಕಾಬಂದಿ ಹಾಕಬೇಕು. ಯಾವುದೇ ಕಾರಣಕ್ಕೂ ನಾವು ಪೂಜಿಸುವ ಗೋವಂಶಕ್ಕೆ ಯಾವುದೇ ರೀತಿಯ ಬಲಿ/ ಕುರ್ಬಾನಿ/ ಹತ್ಯೆ/ಹಿಂಸೆಯಾದರೆ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಆಗುವುದು ಸಹಜ. ಹಾಗೆಯೇ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಕಾರ್ಯ ಆದಾಗ ಹಿಂದೂ ಸಮಾಜದ ಅಕ್ರೋಶ ಭುಗಿಲೇಳುವುದು ಕೂಡ ಸಹಜವಾಗಿದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುವಂತಹ ಯಾವುದೇ ಕಾರ್ಯ ತಮ್ಮ ವ್ಯಾಪ್ತಿಯಲ್ಲಿ ಆಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷರು ಡಾ.ಎಂ.ಬಿ ಪುರಾಣಿಕ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

error: Content is protected !!
Scroll to Top