ಅಂತರ್ ಜಾತಿ ಮದುವೆ ವಿರೋಧ ! ➤ ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು

(ನ್ಯೂಸ್ ಕಡಬ) newskadaba.com ತಿರುವನಂತಪುರ, ಜೂ. 21.ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು  ಬಲವಂತವಾಗಿ ಎಳೆದೊಯ್ದಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೂ.17 ರಂದು ಆಲ್ಫಿಯಾ(18) ಅಖಿಲ್(21) ನನ್ನು ತಿರುವನಂತಪುರದ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ, ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ,ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ವಿರೋಧವಿದೆ ಎಂದು ತಿಳಿದುಬಂದಿದೆ.

Also Read  ಸುಳ್ಯ: ಮದುವೆ ದಿಬ್ಬಣಕ್ಕೆ ಹೊರಟ ಬಸ್ ಪಲ್ಟಿ ➤ ಐವರು ಮೃತ್ಯು, 20 ಮಂದಿಗೆ ಗಾಯ

 

 

 

 

error: Content is protected !!
Scroll to Top