ಗೃಹ ಜ್ಯೋತಿ ಯೋಜನೆಗೆ ಪ್ರತ್ಯೇಕ ಲಿಂಕ್ ರಿಲೀಸ್ ಮಾಡಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 21. ರಾಜ್ಯ ಸರ್ಕಾರದಿಂದ ಗ್ರಾಮ ಒನ್ ಕೇಂದ್ರಗಳಿಗೆ ಪ್ರತ್ಯೇಕ ಲಿಂಕ್ ರಿಲೀಸ್ ಮಾಡಲಾಗಿದ್ದು, ಹೀಗಾಗಿ ಸರ್ವರ್ ಸಮಸ್ಯೆಗೆ ಬ್ರೇಕ್ ಬಿದ್ದಿದೆ.  ಇದೀಗ ಒಂದೇ ನಿಮಿಷದಲ್ಲಿ ಗೃಹ ಜ್ಯೋತಿ ಸೌಲಭ್ಯಕ್ಕಾಗಿ ಗ್ರಾಹಕರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರವು ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ವಿದ್ಯುತ್ ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಲು ಪ್ರತ್ಯೇಕ ಲಿಂಕ್ ಅನ್ನು ರಿಲೀಸ್ ಮಾಡಿ, ಈ ಮೂಲಕ ಸರ್ವರ್ ಸಮಸ್ಯೆಯಿಂದ ಆಗುತ್ತಿದ್ದ ಸಮಸ್ಯೆಯನ್ನು ನಿವಾರಿಸಿದೆ. ಗ್ರಾಮ ಒನ್ ಕೇಂದ್ರಗಳಿಗೆ ರಾಜ್ಯ ಸರ್ಕಾರ ನೀಡಿರುವ ಪ್ರತ್ಯೇಕ ಲಿಂಕ್ ಗಳಲ್ಲಿ ವಿದ್ಯುತ್ ಗ್ರಾಹಕರು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕೇವಲ ಒಂದೇ ಒಂದು ನಿಮಿಷಗಳಲ್ಲಿ ಗೃಹ ಜ್ಯೋತಿ ಯೋಜನೆಗೆ ಜನರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ಗೃಹ ಜ್ಯೋತಿ ಯೋಜನೆಯ ಸೌಲಭ್ಯಕ್ಕಾಗಿ https://sevasindhugs.karnataka.gov.in/gruhajyothi/renderApplicationForm.do?serviceId=19890005&UUID=5ffe9585-600b-44c2-b45f-4536f55a4d74&directService=true&tempId=8410&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=MQLF-BVL8-LJGM-3BHN-TFIY-S2AL-VH8S-Q24Q ನಲ್ಲಿ ಕ್ಲಿಕ್ ಮಾಡಿದಲ್ಲಿ ನೇರವಾಗಿ ಅರ್ಜಿಸಲ್ಲಿಸಲು ಅರ್ಜಿ ತೆರೆದುಕೊಳ್ಳಲಿದೆ. ಇದಲ್ಲದೇ https://sevasindhugs.karnataka.gov.in/about_kannada.html#  ಲಿಂಕ್ ಕೂಡ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

error: Content is protected !!

Join the Group

Join WhatsApp Group