(ನ್ಯೂಸ್ ಕಡಬ) newskadaba.com ವಾಷ್ಟಿಂಗ್ಟನ್, ಜೂ. 21. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಜಲಾಂತರ್ಗಾಮಿ ನೌಕೆಯೊಂದು ನಾಪತ್ತೆಯಾಗಿದ್ದು, ಇದಕ್ಕಾಗಿ ಮಧ್ಯ ಅಟ್ಲಾಂಟಿಕ್ ಸಾಗರದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಯುಎಸ್ ಕರಾವಳಿ ಪಡೆ, ಕೆನಡಾದ ಜಂಟಿ ರಕ್ಷಣಾ ಕೇಂದ್ರ ಮತ್ತು ಫ್ರಾನ್ಸ್ ನ ಸಂಶೋಧನಾ ಹಡಗುಗಳ ರಕ್ಷಣಾ ತಂಡಗಳಿಗೆ ಸಾಗಾರದಾಳದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ ಎಂಬ ಸುಳಿವೂ ಸಿಕ್ಕಿದ್ದು, ನೌಕೆಯ ಪತ್ತೆಗೆ ನಿರಂತರವಾಗಿ ಶ್ರಮಿಸುತ್ತಿವೆ. ನಾಪತ್ತೆಯಾದ ನೌಕೆಯಲ್ಲಿ ಐವರು ಸಿಬ್ಬಂದಿಗಳಿದ್ದು, ಇನ್ನು 30 ಗಂಟೆಗಳಿಗೆ ಬೇಕಾದ ಆಮ್ಲಜನಕ ಮಾತ್ರ ಉಳಿದಿದೆ ಎಂದು ಯುಎಸ್ ಕರಾವಳಿ ಪಡೆ ತಿಳಿಸಿದೆ. ಪಾಕಿಸ್ತಾನದ ಬಿಲಿಯನೇರ್ ಉದ್ಯಮಿ ಶೆಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಹಾಗೂ ಬ್ರಿಟಿಷ್ ಬಿಲಿಯನೇರ್ ಮತ್ತು ಏವಿಯೇಷನ್ ಕನ್ಸಲ್ಟೆನ್ಸಿ ಆಕ್ಷನ್ ಏವಿಯೇಷನ್ ಅಧ್ಯಕ್ಷ ಹಮೀಶ್ ಹಾರ್ಡಿಂಗ್ ಜಲಾಂತರ್ಗಾಮಿ ನೌಕೆಯ ಪೈಲಟ್, ಫ್ರಾನ್ಸ್ ನಿವಾಸಿ ಪಾಲ್ ಹೆನ್ರಿ ಜಲಾಂತರ್ಗಾಮಿ ನೌಕೆಯಲ್ಲಿದ್ದರು ಎನ್ನಲಾಗಿದೆ.