ಕಾಂಞಂಗಾಡ್- ಕಾಣಿಯೂರು ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಸ್ಪೀಕರ್ ಯುಟಿ.ಖಾದರ್ ಗೆ ಮನವಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜೂ. 21. ಕಾಞಂಗಾಡ್- ಕಾಣಿಯೂರು ರೈಲ್ವೇ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಬಿಲ್ಡಪ್ ಕಾಸರಗೋಡು ಸೊಸೈಟಿ ಸ್ಪೀಕರ್‌ ಯುಟಿ ಖಾದರ್ ಅವರಿಗೆ ಮನವಿ ಸಲ್ಲಿಸಿತು.


ಪಾಣತ್ತೂರು ಮೂಲಕ ದ.ಕ. ದಲ್ಲಿ ಕಾಞಂಗಾಡ್ ಮತ್ತು ಕಾಣಿಯೂರು ನಡುವೆ ಉದ್ದೇಶಿತ ಬಿಜಿ ಲೈನಿಗೆ ಕರ್ನಾಟಕ ಸರ್ಕಾರದಿಂದ 40.5 ಕಿ.ಮೀ.ಗೆ ಒಪ್ಪಿಗೆ ಪತ್ರಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಕಾಯುತ್ತಿದ್ದು, ಇದರ ಅಗತ್ಯ ಕ್ರಮಗಳಿಗಾಗಿ ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯುಟಿ ಖಾದರ್ ಫರೀದ್ ಅವರಿಗೆ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಲಾಯಿತು. ಬಿಲ್ಡಪ್ ಕಾಸರಗೋಡಿನ ವತಿಯಿಂದ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವ, ಸಂಶೋಧನೆ ಮತ್ತು ಮೂಲಸೌಕರ್ಯ ತಜ್ಞ ಡಾ. ಜೋಸ್ ಕೊಚಿಕುನ್ನೆಲ್ ಹಾಗೂ ಕಾಞಂಗಾಡ್-ಸುಳ್ಯ ರೈಲ್ವೇ ಕ್ರಿಯಾ ಸಮಿತಿಯ ಪ್ರತಿನಿಧಿಗಳಾದ ಮಹಮ್ಮದ್ ಅಸ್ಲಂ, ಪೀಟರ್ ಕಾಞಂಗಾಡ್, ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಯೂಸುಫ್ ಹಾಜಿ, ರವೀಂದ್ರನ್ ಉಪಸ್ಥಿತರಿದ್ದರು.

Also Read  ಕಡಬ ಮೂಲದ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ *➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು ➤ ಅಶೋಕ್ ಎಂಬವರ ಸಮಯಪ್ರಜ್ಞೆಯಿಂದ ವಂಚನಾ ಜಾಲ ಬೆಳಕಿಗೆ

ಈ ಯೋಜನೆಯು ಸಾಕಾರಗೊಂಡರೆ, ನಿರ್ಮಾಣ ಸಾಮಗ್ರಿಗಳ ಕೃಷಿ ಉತ್ಪನ್ನಗಳ ಸಾಗಣೆಗೆ ತಿರುವನಂತಪುರ- ಕೊಚ್ಚಿ- ಕ್ಯಾಲಿಕಟ್- ಕಾಞಂಗಾಡ್- ಸುಳ್ಯ- ಮೈಸೂರು-ಹಾಸನ- ಬೆಂಗಳೂರು- ಚೆನ್ನೈ- ಹೈದ್ರಾಬಾದ್ ಅನ್ನು ಸಂಪರ್ಕಿಸುವ ಮುಖ್ಯ ಹಣಕಾಸು ಕಾರಿಡಾರ್ ಆಗಲಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದರೊಂದಿಗೆ ಇದು ಭಾರತದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ವಿವರಿಸಲಾಯಿತು.

error: Content is protected !!
Scroll to Top