ನಾಳೆ (ಜೂ. 22) ವಿದ್ಯುತ್ ನಿಲುಗಡೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 20. 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ 110ಕೆವಿ ಮತ್ತು 33ಕೆ.ವಿ ಲೈನ್ ಬೇ, ಪರಿವರ್ತಕ ಮತ್ತು 11ಕೆವಿ ಫೀಡರ್ ಗಳ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 22ರ ಗುರುವಾರದಂದು ಪೂರ್ವಾಹ್ನ 10ರಿಂದ ಸಾಯಂಕಾಲ 4 ಗಂಟೆಯವರೆಗೆ 33ಕೆ.ವಿ ಪುತ್ತೂರು-ಕಡಬ-ಸುಬ್ರಹ್ಮಣ, 33ಕೆವಿ ಪುತ್ತೂರು-ಕುಂಬ್ರ-ಬೆಳ್ಳಾರೆ, 33ಕೆ.ವಿ ಪುತ್ತೂರು-ಸುಳ್ಯ ಹಾಗೂ 33ಕೆ.ವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗಗಳ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದ್ದರಿಂದ 110/33/11ಕೆವಿ ಪುತ್ತೂರು ಹಾಗೂ 33/11ಕೆವಿ ಕಡಬ, ನೆಲ್ಯಾಡಿ, ಸವಣೂರು, ಬಿಂದು ಮತ್ತು ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ಎದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Also Read  ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರದ ಹಣವನ್ನು ವಿಳಂಬವಿಲ್ಲದೇ ನೀಡಬೇಕು ➤ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

error: Content is protected !!
Scroll to Top