(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20. ಶ್ರೀ ದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ 2ನೇ ವರ್ಷದ ವಿದ್ಯಾರ್ಥಿಗಳ ಆಹಾರ ಮತ್ತು ಪಾನೀಯ ಉತ್ಪಾದನೆ (ಅಡುಗೆಮನೆ), ಆಹಾರ ಮತ್ತು ಪಾನೀಯ ಸೇವೆ, ಮುಂಭಾUದ ಕಛೇರಿ ನಿರ್ವಹಣೆ ಮತ್ತು ಮನೆಗೆಲಸದ ಕೌಶಲ್ಯಗಳ ಪ್ರದರ್ಶನ ‘ದಿ ಫುಡೀ ಸ್ಪಾಟ್ ಲೈಟ್’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ದೇವಿ ಇನ್ಸ್ಟಿಟ್ಯೂಟ್‍ಆಫ್ ಸೋಶಿಯಲ್ ವರ್ಕ್ ಪ್ರಾಂಶುಪಾಲರಾದ ಶ್ರೀಮತಿ ಅಭಿತಾ, ಶ್ರೀ ದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಪ್ರಾಂಶುಪಾಲರಾದ ಸ್ಯಾಮ್ಯುಯೆಲ್ ಆರ್ ಜತ್ತಣ್ಣ ಅವರು ಉದ್ಘಾಟಿಸಿದರು. ಮತ್ತು ಕು. ಪ್ರಜ್ವಲಿ ಅಶೋಕ್ ಕೋಟ್ಯಾನ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರು ಉಪಸ್ಥಿತರಿದ್ದರು.
ಪ್ರದರ್ಶನದಲ್ಲಿದ್ದ ಆಹಾರಗಳು:
ಸ್ಟಾರ್ಟರ್: ಪನೀರ್ ಶಾಶ್ಲಿಕ್, ಚಿಕನ್ ಶಾಶ್ಲಿಕ್, ಪೆರಿಪೆರಿ ಚಿಕನ್, ಚಿಕನ್ ಮೊಮೊಸ್, ಇತ್ಯಾದಿ
ಮುಖ್ಯ ಕೋರ್ಸ್: ವೆಜ್ ದಮ್ ಬಿರಿಯಾನಿ, ತಲಶ್ಯೇರಿ ದಮ್ ಬಿರಿಯಾನಿ, ಮಟನ್ ದಮ್ ಬಿರಿಯಾನಿ, ಇತ್ಯಾದಿ
ಸಿಹಿತಿಂಡಿ: ಗಜರ್ ಕಾ ಹಲ್ವಾ, ರಸಮಲೈ, ಕಪ್ ಕೇಕ್ ಗಳು, ಇತ್ಯಾದಿ
ಮಾಕ್ ಟೇಲ್‍ಗಳು: ಫ್ರೆಂಚ್ ಕಿಸ್ ಬ್ಲೂ ಲಗೂನ್, ಕಪಲ್ ಡಿ ಲೈಟ್, ಇತ್ಯಾದಿ
ಫೈನಾನ್ಸ್ ವಿದ್ಯಾರ್ಥಿಗಳು 20 ರೂಪಾಯಿ ಮೌಲ್ಯದ ಲಕ್ಕಿ ಕೂಪನ್ ಗಳನ್ನು ಮಾರಾಟ ಮಾಡಿದ್ದು, ಅತಿಥಿಗಳು ಲಕ್ಕಿ ಡ್ರಾ ವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯೇನಪೋಯ ಕಾಲೇಜಿನ ವಿದ್ಯಾರ್ಥಿ ರಾಶಿನ್ ಪ್ರಥಮ ಮತ್ತು ಶ್ರೀ ದೇವಿ ಇಂಟೀರಿಯರ್ ಡಿಸೈನ್ ಕಾಲೇಜಿನ ವಿಶನ್ ದ್ವಿತೀಯ ಬಹುಮಾನ ಪಡೆದಿದ್ದಾರೆ.