ಹಸಿರು ಕ್ರಾಂತಿಗೆ ಕೈ ಜೋಡಿಸೋಣ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 20. ಸುರತ್ಕಲ್ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಸುರತ್ಕಲ್ ಸಮೀಪದ ಗುಡ್ಡೆ ಕೊಪ್ಪದ ಎಮರಾಲ್ಡ್ ಬೇ ಬಡಾವಣೆಯಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಚಾಲನೆ ನೀಡಿ ಮಾತನಾಡಿ, ನಿರಂತರವಾಗಿ ಪರಿಸರದ ಮೇಲಿನ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ  ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಮುಂದೆ ಹನಿಹನಿ ನೀರಿಗೂ ತತ್ವಾರ ಬರಬಹುದು. ಶುದ್ಧವಾದ ಆಮ್ಲಜನಕಯುಕ್ತ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್ ಬೆನ್ನ ಮೇಲೆ ನೇತಾಡಿಸಿಕೊಂಡು ಓಡಾಡುವ ಕಾಲ ಬರಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಂಡು  ಗಿಡ ನೆಟ್ಟು ಪೋಷಿಸಿ, ಕಾಡು ಉಳಿಸಬೇಕು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ಹಸಿರು ಕ್ರಾಂತಿಗೆ (ಗ್ರೀನ್ ರೆವೆಲ್ಯೂಷನ್) ಎಲ್ಲಾ ಗೃಹರಕ್ಷಕರು ಕಟಿಬದ್ಧರಾಗಬೇಕು. ಪ್ರತಿ ಗೃಹರಕ್ಷಕರು ವರ್ಷದಲ್ಲಿ ಕನಿಷ್ಟ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಿ ಪೋಷಿಸಬೇಕು. ಹಾಗಾದಲ್ಲಿ ಪರಿಸರದ ಸಮತೋಲನ ಉಂಟಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬಹುದು ಎಂದು ಅಭಿಪ್ರಾಯಪಟ್ಟರು.

Also Read  ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

ಖ್ಯಾತ ಪರಿಸರವಾದಿ ಶ್ರೀ ಮಾಧವ ಉಳ್ಳಾಲ್ ಅವರು ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಪರಿಸರ ರಕ್ಷಣೆ, ಗಿಡ ಮರಗಳ ಪೋಷಣೆ ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್ ಉದ್ಯೋಗಿ ಶ್ರೀ ಸುಜಿತ್, ಪರಿಸರ ಪ್ರೇಮಿ ಮೋನಪ್ಪ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್, ಮಂಗಳೂರು ಘಟಕದ ಸುನಿಲ್, ದಿವಾಕರ್ ಕನಕಪ್ಪ ಅರವಿಂದ್ ಹಾಗೂ ಇತರ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಮಂಗಳೂರು : ಶಾಸಕ ಯು.ಟಿ ಖಾದರ್ ಗೆ ವಂಚಿಸಲು ಯತ್ನ..!!      ➤ ಆರೋಪಿಯ ವಿರುದ್ದ ದೂರು ದಾಖಲು              

error: Content is protected !!
Scroll to Top