‘ಕಲ್ಲಡ್ಕದಲ್ಲಿ ಮುಂದಿನ ಚುನಾವಣೆ ಅಲ್ಲಾಹು ಮತ್ತು ಶ್ರೀರಾಮನ ನಡುವೆ’ ► ಮಾತಿನ ಭರದಲ್ಲಿ ವಿವಾದ ಸೃಷ್ಟಿಸಿದ ಕಾರ್ಕಳ ಶಾಸಕ

(ನ್ಯೂಸ್ ಕಡಬ) newskadaba.com ಬಿ.ಸಿ.ರೋಡ್, ಜ.23. ರಾಜಕೀಯ ಪ್ರಚಾರದ ನಡುವೆ ಮಾತಿನ ಭರಾಟೆಯಲ್ಲಿ ಶಾಸಕರೋರ್ವರು ಎಡವಟ್ಟು ಮಾಡಿಕೊಂಡ ಘಟನೆ ಮಂಗಳವಾರದಂದು ಕಲ್ಲಡ್ಕದಲ್ಲಿ ನಡೆದಿದೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಂಟ್ವಾಳ ಶಾಸಕ ರಮಾನಾಥ್ ರೈ ನೀಡಿದ್ದ ಅಲ್ಲಾಹನ ಕೃಪೆಯಿಂದ 7 ಬಾರಿ ಶಾಸಕನಾಗಿದ್ದೇನೆ ಎಂಬ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ‘ಮುಂದಿನ ಚುನಾವಣೆಯು ಅಲ್ಲಾಹು ಮತ್ತು ಶ್ರೀ ರಾಮನ ಮಧ್ಯೆ ನಡೆಯಲಿದೆ’ ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಬಂಟ್ವಾಳ ಪರಿವರ್ತನೆಗೆ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಮತ್ತೆ ಮತ್ತೆ ಅಲ್ಲಾಹನನ್ನು ಗೆಲ್ಲಿಸುತ್ತೀರಾ? ಅಥವಾ ಶ್ರೀ ರಾಮನನ್ನು ಆರಾಧಿಸುವ ಅಭ್ಯರ್ಥಿಯನ್ನು ಗೆಲ್ಲಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

Also Read  ಬ್ಲಾಕ್ ಫಂಗಸ್‍ಗೆ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಔಷಧ ಪೂರೈಕೆ ➤ ಡಿವಿಎಸ್

error: Content is protected !!
Scroll to Top