ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ ➤ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 20. ಅಪ್ರಾಪ್ತ ಬಾಲಕಿಯನ್ನು ಆಟೋ ರಿಕ್ಷಾದಲ್ಲಿ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ರಿಕ್ಷಾ ಚಾಲಕ ಸಾದಿಕ್ ಮತ್ತು ಕರೀಂ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂತ್ರಸ್ತೆ ಬಾಲಕಿಯು ನೆರೋಲ್ದಪಲ್ಕೆ ಎಂಬಲ್ಲಿ ಜೂನ್ 18 ರಂದು ತನ್ನ ತಾಯಿಯ ಸ್ವಸಹಾಯ ಸಂಘದ ಕಂತು ಪಾವತಿಸಲು ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿಯ ಕುಟುಂಬಕ್ಕೆ ಪರಿಚಯವಿರುವ ಕರೀಂ ಬಾಲಕಿಯನ್ನು ರಿಕ್ಷಾಗೆ ಹತ್ತಿಸಿ, ಬಳಿಕ ಕರೀಂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಕರೀಂ ಸಂತ್ರಸ್ತ ಬಾಲಕಿಗೆ 200 ರೂ. ನೀಡಿ ತನ್ನೊಂದಿಗೆ ಆಟೋ ರಿಕ್ಷಾದಲ್ಲಿ ಬರುವಂತೆ ಆಮಿಷ ಒಡ್ಡಿ ಕಿರುಕುಳ ನೀಡಿದ್ದಾನೆ. ಇದನ್ನು ವಿರೋಧಿಸಿದ ಬಾಲಕಿ ಆಟೋ ರಿಕ್ಷಾದಿಂದ ಜಿಗಿದಿದ್ದಾಳೆ. ಈ ವೇಳೆ ಆಕೆಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಬಾಲಕಿ ವಾಹನದಿಂದ ಜಿಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಸಂತ್ರಸ್ತ ಬಾಲಕಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಳು.

Also Read  ರಸ್ತೆ ದುರಸ್ತಿಗೆ ರೂ.2.69 ಕೋಟಿ ಅನುದಾನ ಬಿಡುಗಡೆ  ➤ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್  

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜೂ. 20.  ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನಿಡಿರುವ  ಘಟನೆ ಬಂದಾರು ಗ್ರಾಮದ ನೆರೋಲ್ದಪಲ್ಕೆ ಎಂಬಲ್ಲಿ ನಡೆದಿದೆ.

ಆರೋಪಿ ಆಟೋ ರಿಕ್ಷಾ ಚಾಲಕ ಹಾಗೂ ಮತ್ತೊಬ್ಬನ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಆಟೋ ರಿಕ್ಷಾ ಚಾಲಕ ಸಾದಿಕ್ ಹಾಗೂ ಸ್ಥಳೀಯ ನಿವಾಸಿ ಕರೀಂ ಅವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ15 ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಜೂನ್ 18 ರಂದು 17 ವರ್ಷದ ಸಂತ್ರಸ್ತ ಬಾಲಕಿ ತನ್ನ ತಾಯಿ ಪಡೆದ ಸಾಲದ ಕಂತು ಪಾವತಿಸಲು ಸ್ವಸಹಾಯ ಸಂಘದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿಯ ಕುಟುಂಬಕ್ಕೆ ಪರಿಚಯವಿರುವ ಕರೀಂ ಮತ್ತು ಆಟೋ ಚಾಲಕ ಸಾದಿಕ್ ಎಂಬಾತ ಬಾಲಕಿಯ ಕುಟುಂಬದೊಂದಿಗೆ ಇರುವ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.ಕರೀಂ ಸಂತ್ರಸ್ತ ಬಾಲಕಿಗೆ 200 ರೂ ನೀಡಿ ತನ್ನೊಂದಿಗೆ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿಗೆ ಬರುವಂತೆ ಆಮಿಷ ಒಡ್ಡಿ ಕಿರುಕುಳ ನೀಡಿದ್ದಾನೆ. ಸಂತ್ರಸ್ತ ಬಾಲಕಿ ಇದನ್ನು ವಿರೋಧಿಸಿ ಆಟೋ ರಿಕ್ಷಾದಿಂದ ಜಿಗಿದಿದ್ದಾಳೆ. ಆಕೆಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಬಾಲಕಿ ವಾಹನದಿಂದ ಜಿಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.ಸಂತ್ರಸ್ತ ಬಾಲಕಿ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

Also Read  ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು - ಓರ್ವ ವಶಕ್ಕೆ

error: Content is protected !!
Scroll to Top