SDPI ಮುಖಂಡನ ಬರ್ಬರ ಹತ್ಯೆ: ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.21. SDPI ಮುಖಂಡ ಕಲಾಯಿ ಅಶ್ರಫ್ ಬರ್ಬರವಾಗಿ ಕೊಲೆಗೀಡಾದ ನಂತರ ಜಿಲ್ಲೆಯ ಅಲ್ಲಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಶಾಂತಿಪ್ರಿಯರನ್ನು ಆತಂಕಕ್ಕೀಡುಮಾಡಿದೆ.

ಕಳೆದ ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕದಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚನೆ ನೀಡುತ್ತಿದ್ದಾಗ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಸಂಗಡಿಗರು ಬಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಕೋಮಿನ ಜನರು ಸೇರತೊಡಗಿದ್ದರಿಂದ ಪರಿಸ್ಥಿತಿ ಕೈ ಮೀರುವುದನ್ನರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದರು. ಅಶ್ರಫ್ ಕೊಲೆಗೀಡಾದ ನಂತರ ಜಿಲ್ಲೆಯಲ್ಲಿ ಮೊದಲೇ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಬೆಂಜನಪದವು, ಮೆಲ್ಕಾರ್, ಬಂಟ್ವಾಳ, ಬಿ.ಸಿ.ರೋಡ್, ಕಲ್ಲಡ್ಕ ಸೇರಿದಂತೆ ಹಲವೆಡೆ ಉದ್ವಿಗ್ನ ವಾತಾವರಣ ಉಂಟಾಗಿದೆ. ಮನೆ ಬಿಟ್ಟು ಹೊರಬರದಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.

Also Read  ಕೋರಿಯಾರ್: ಕುಮಾರಧಾರಾ ನದಿಗೆ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top