ಬಿದ್ದು ಸಿಕ್ಕಿದ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ. 20. ವಿದ್ಯಾರ್ಥಿನಿಯೊಬ್ಬಳು ದಾರಿಯಲ್ಲಿ ಸಿಕ್ಕಿದ ಹಣವನ್ನು ಪ್ರಾಮಾಣಿಕತೆಯಿಂದ ಮರಳಿ ವಾರಸುದಾರರಿಗೆ ಸೇರಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಡಾನ್ ಬಾಸ್ಕೋ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಧನ್ವಿ ಪೂಜಾರಿ ಶಾಲೆಗೆ ಹೋಗುತ್ತಿದ್ದ ವೇಳೆ 500 ರೂ. ಮುಖಬೆಲೆಯ 11ಸಾವಿರ ರೂ.ಗಳಿದ್ದ ನೋಟಿನ ಕಟ್ಟು ಸಿಕ್ಕಿದ್ದು, ಆಕೆ ಅದನ್ನು ಗಂಗೊಳ್ಳಿ ಪೊಲೀಸರಿಗೆ ನೀಡಿ ವಾರಸುದಾರರಿಗೆ ಮರಳಿಸುವಂತೆ ತಿಳಿಸಿದ್ದಳು. ಪೊಲೀಸರು ಅದರ ವಾರಸುದಾರರನ್ನು ಪತ್ತೆ ಹಚ್ಚಿ ಹಣವನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಮತ್ತೆ ಚಿನ್ನದ ದರದಲ್ಲಿ ಏರಿಕೆ

 

 

 

error: Content is protected !!
Scroll to Top