ಕಡಬ: ಸೈಂಟ್ ಜೋಕಿಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ➤ ನಾಯಕಿಯಾಗಿ ಹರ್ಷಿಣಿ, ಕಾರ್ಯದರ್ಶಿಯಾಗಿ ಸನೂಷ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ. 19. ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ 2023 -24ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಮನದಟ್ಟು ಮಾಡುವ ಉದ್ದೇಶದಿಂದ ನೇರ ಚುನಾವಣೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಯಿತು.

ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಹರ್ಷಿಣಿ, ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸನೂಷ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರ್ಷಿತ ಹಾಗೂ ಅಬ್ದುಲ್ ಸಪ್ರಾಜ್ ದ್ವಿತೀಯ ವಾಣಿಜ್ಯ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ಮಸ್ರೂರ್ ಅಹ್ಸಾನ್ ಪ್ರಥಮ ವಿಜ್ಞಾನ ವಿಭಾಗ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ದ್ವಿತೀಯ ವಾಣಿಜ್ಯ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಕನಝ್, ವಿಜ್ಞಾನ ಸಂಘದ ಕಾರ್ಯದರ್ಶಿಯಾಗಿ ಮನೀಷ ದ್ವಿತೀಯ ವಿಜ್ಞಾನ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ಅರ್ಲಿನ್ ಗ್ರೇಸ್ ಡಿ’ಸೋಜಾ ಪ್ರಥಮ ವಿಜ್ಞಾನ ವಿಭಾಗ, ವಾಣಿಜ್ಯ ಸಂಘದ ಕಾರ್ಯದರ್ಶಿಯಾಗಿ ಆಯಿಷತ್ ತಸ್ನೀಮ್ ದ್ವಿತೀಯ ವಾಣಿಜ್ಯ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ಕೆ.ಎಚ್. ಹುನೈಫ್ ಆಯ್ಕೆಗೊಂಡರು. ವಿದ್ಯಾಸಂಸ್ಥೆಯ ಸಂಚಾಲಕರಾದ ವಂ.ಪಾವ್ಲ್ ಪ್ರಕಾಶ್ ಡಿ’ಸೋಜ ಅವರ ಮಾರ್ಗದರ್ಶನದಂತೆ ಪ್ರಾಚಾರ್ಯರಾದ ಶ್ರೀ ಕಿರಣ್ ಕುಮಾರ್ ಚುನಾವಣಾ ಮೇಲುಸ್ತುವಾರಿಯನ್ನು ವಹಿಸಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ಶ್ರೀ ಮ್ಯಾಥ್ಯು ಇ .ಜೆ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸಿದರು. ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು.

Also Read  ವಶಪಡಿಸಿಕೊಂಡ ಲಾರಿ ಬಹಿರಂಗ ಹರಾಜು

error: Content is protected !!
Scroll to Top